newsics.com
ನವದೆಹಲಿ: ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಯವರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ಗುರ್ವರ (ಸೆ.24) ದೆಹಲಿಯಲ್ಲಿ ನೆರವೇರಿತು.
ಸಚಿವ ಸುರೇಶ್ ಅಂಗಡಿ ಅವರು ನಿನ್ನೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಪಾರ್ಥಿವ ಶರೀರವನ್ನು ಸಚಿವರ ತವರೂರು ಬೆಳಗಾವಿಗೆ ತರಲು ಕೊರೋನಾ ನಿಯಮಗಳು ಅಡ್ಡಿಯಾದ ಹಿನ್ನೆಲೆಯಲ್ಲಿ ದೆಹಲಿಯಲ್ಲಿಯೇ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ನನ್ನ ನೋಡಾಕೆ ಮಗ ಬಂದೇ ಬರ್ತಾನೆ…
ಸುರೇಶ ಅಂಗಡಿ ಅವರ ಅಂತ್ಯಕ್ರಿಯೆ ದೆಹಲಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಲಿಂಗಾಯಿತ ವೀರಶೈವ ಸಂಪ್ರದಾಯದಂತೆ ನೆರವೇರಿತು. ದೆಹಲಿಯ ದ್ವಾರಕಾ ರುದ್ರಭೂಮಿಯ 24ನೇ ಸೆಕ್ಟರ್ ನಲ್ಲಿ ಕೋವಿಡ್ ನಿಯಮಗಳನ್ನು ಅನುಸರಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಕುಟುಂಬಸ್ಥರು, ಡಿಸಿಎಂ ಲಕ್ಷ್ಮಮಣ ಸವದಿ, ಸಚಿವ ಜಗದೀಶ್ ಶೆಟ್ಟರ್, ಅಣ್ಣಾಸಾಹೇಬ್ ಜೊಲ್ಲೆ ಮತ್ತಿತರರು ಭಾಗಿಯಾಗಿದ್ದರು.
ನನ್ನ ನೋಡಾಕೆ ಮಗ ಬಂದೇ ಬರ್ತಾನೆ…