newsics.com
ಕಾಸರಗೋಡು: ರಾಜ್ಯ. ಸಭಾ ಸದಸ್ಯ ಹಾಗೂ ಚಿತ್ರನಟ ಸುರೇಶ್ ಗೋಪಿ ಮಂಜೇಶ್ವರ ಸಮೀಪದ ಕೊಂಡೆವೂರು ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಕಾಸರಗೋಡು ಜಿಲ್ಲೆಗೆ ಭೇಟಿ ನೀಡಿರುವ ಸುರೇಶ್ ಗೋಪಿ ಎಡನೀರು ಮಠ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳಿಗೆ ಭೇಟಿ ಕೊಟ್ಟಿದ್ದಾರೆ.
ಸುರೇಶ್ ಗೋಪಿ ಕೇಂದ್ರ ತೆಂಗು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿದ್ದಾರೆ. ಕಾಸರಗೋಡಿನಲ್ಲಿ ದೇಶದ ಅತೀ ದೊಡ್ಡ ತೆಂಗು ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ (ಸಿಪಿಸಿಆರ್ ಐ) ಕಾರ್ಯಾಚರಿಸುತ್ತಿದೆ.