Wednesday, November 30, 2022

ತೂಕ ಇಳಿಸಲು ನಾಯಿಗೂ ಶಸ್ತ್ರಚಿಕಿತ್ಸೆ!

Follow Us

newsics.com

ಪುಣೆ: ದೇಹದ ತೂಕ ಇಳಿಸಿಕೊಳ್ಳಲು ಹಲವರು ನಾನಾ ಕಸರತ್ತು ಮಾಡುತ್ತಾರೆ. ಏನೇನೋ ಸರ್ಕಸ್ ಮಾಡುತ್ತಾರೆ. ಶಸ್ತ್ರಚಿಕಿತ್ಸೆ ಕೂಡ ಮಾಡಿಸಿಕೊಳ್ಳುತ್ತಾರೆ.

ಇವೆಲ್ಲ ಮನುಷ್ಯರ ಕಥೆಯಾಯ್ತು. ಆದರೆ ಈಗ ದೇಹದ ತೂಕ ಇಳಿಸಲು ನಾಯಿಗೂ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಪುಣೆಯಲ್ಲಿ ಇಂಥದ್ದೊಂದು ವಿಶೇಷ ಶಸ್ತ್ರಚಿಕಿತ್ಸೆ ನಡೆದಿದೆ. ಇದು ದೇಶದಲ್ಲಿಯೇ ಮೊದಲನೆಯದ್ದು ಎನ್ನಲಾಗಿದೆ.
ಪುಣೆಯ ಯಾಸ್ಮಿನ್‌ ದಾರುವಾಲ ಎಂಬುವರ ‘ದೀಪಿಕಾ’ ಎಂಬ 3 ವರ್ಷದ ಶ್ವಾನ ಅಗತ್ಯಕ್ಕಿಂತ ಹೆಚ್ಚು ಬೆಳವಣಿಗೆ ಕಂಡಿತ್ತು. 30 ಕೆ.ಜಿ. ಇರಬೇಕಾದ ನಾಯಿ 50 ಕೆ.ಜಿ. ತಲುಪಿದಾಗ
ಆತಂಕ ಶುರುವಾಯಿತು. ಆಗ ಪಶುವೈದ್ಯ ಡಾ. ನರೇಂದ್ರ ಪರದೇಶಿ ಅವರನ್ನು ದಾರುವಾಲ ಸಂಪರ್ಕಿಸಿದರು. ತೂಕ ಇಳಿಕೆ ಶಸ್ತ್ರಚಿಕಿತ್ಸೆ (ಸ್ಲಿàವ್‌ ಗ್ಯಾಸ್ಟ್ರೆಕ್ಟಮಿ)ಗೆ ನಿರ್ಧರಿಲಾಯಿತು. ಪಶುವೈದ್ಯರಿಗೇ ಇದು ಹೊಸತಾಗಿತ್ತು. ಹೀಗಾಗಿ ಅವರು 6 ತಿಂಗಳು ಮತ್ತೂಬ್ಬ ಪಶುವೈದ್ಯ ಡಾ. ಶಶಾಂಕ್‌ ಶಾ ಬಳಿ ತರಬೇತಿ ಪಡೆದುಕೊಂಡರು.

ಜೂ. 6ರಂದು ಪುಣೆಯಲ್ಲಿ ಇಬ್ಬರು ವೈದ್ಯರು ದೀಪಿಕಾಗೆ ಸರ್ಜರಿ ನಡೆಸಿದರು. ಎರಡೂವರೆ ತಾಸು ಕಾಲ ನಡೆದ ಆಪರೇಷನ್‌ ಬಳಿಕ ಶ್ವಾನವೀಗ 5 ಕೆ.ಜಿ. ತೂಕ ಕಳೆದುಕೊಂಡಿದೆ. ಹೈಪೋಥೈರಾಯಿಡಿಸಂ ಮತ್ತು ಹೆಚ್ಚು ಕಾರ್ಬೋಹೈಡ್ರೇಟ್‌ಯುಕ್ತ ಆಹಾರದಿಂದ ನಾಯಿಗೆ ಈ ಸಮಸ್ಯೆಯಾಗಿತ್ತು ಎಂದು ಡಾ. ನರೇಂದ್ರ ಹೇಳಿದ್ದಾರೆ.ವಆರೋಗ್ಯವಂತ ಶ್ವಾನಕ್ಕೆ ಬಾಡಿ ಮಾಸ್‌ ಇಂಡೆಕ್ಸ್‌ 80-90 ಇರಬೇಕು. ಆದರೆ ದೀಪಿಕಾಗೆ ಅದು 280-290 ಇತ್ತು. ಸದ್ಯ ಲ್ಯಾಪ್ರೋಸ್ಕೋಪಿಕ್‌ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈಗ ಈ ನಾಯಿ 45 ಕೆ.ಜಿ. ತೂಕ ಹೊಂದಿದೆ. ಮುಂದಿನ ಮೂರು ವಾರಗಳಲ್ಲಿ ಹರ್ನಿಯಾ ತೆಗೆಯಲು ಮತ್ತೂಂದು ಶಸ್ತ್ರಚಿಕಿತ್ಸೆ ನಡೆಯಲಿದೆ.

ಈಗ ನಡೆದಿರುವ ಶಸ್ತ್ರಚಿಕಿತ್ಸೆಗೆ ಒಂದು ಲಕ್ಷ ರೂ. ವೆಚ್ಚವಾಗಿದೆ ಎಂದು ಯಾಸ್ಮಿನ್‌ ದಾರುವಾಲ ಹೇಳಿದ್ದಾರೆ. ಈ‌ ಮೊದಲು ನಾಯಿಯ ಆಹಾರಕ್ಕಾಗಿಯೇ ನಿತ್ಯ ಹತ್ತು ಸಾವಿರ ರೂ. ಖರ್ಚಾಗುತ್ತಿತ್ತಂತೆ!

ಅಕ್ಕಿ ದರ ದಿಢೀರ್ ಹೆಚ್ಚಳ, ಬೇಳೆಕಾಳು ತುಸು ಅಗ್ಗ

ಈ ‘ಸೂರ್ಯನ ಮೊಟ್ಟೆ’ಗೆ 2.70 ಲಕ್ಷ ರೂಪಾಯಿ!

ಮತ್ತಷ್ಟು ಸುದ್ದಿಗಳು

vertical

Latest News

KSRTC ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ ಬಹುಮಾನ ಗೆಲ್ಲಿ

newsics.com ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನೂತನವಾಗಿ ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ  ಬಹುಮಾನ ಗೆಲ್ಲ  ಬಹುದಾಗಿದೆ. ಮಲ್ಟಿ ಆ್ಯಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ...

ವಿಚಿತ್ರ ಹಬ್ಬದ ಆಚರಣೆ- ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ

newsics.com ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆಯಲ್ಲಿ ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ ಮಾಡುವ ವಿಶಿಷ್ಟ ಆಚರಣೆ ಕಂಡು ಬರುತ್ತದೆ. ಪ್ರತಿವರ್ಷ ಛಟ್ಟಿ ಅಮವಾಸ್ಯೆಯ ಆಸುಪಾಸು ನಡೆಯುವ...

20ಕ್ಕೂ ಹೆಚ್ಚು ಯುವತಿಯರ ಜತೆ ಅಪ್ತಾಭ್ ಸಂಬಂಧ?

newsics.com ನವದೆಹಲಿ:  ಶ್ರದ್ಧಾ ಹತ್ಯೆ ಪ್ರಕರಣದ ಆರೋಪಿ ಅಪ್ತಾಭ್ 20ಕ್ಕೂ ಹೆಚ್ಚು ಯುವತಿಯರ ಜತೆ ಸಂಬಂಧ ಹೊಂದಿರುವ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಪೊಲೀಸ್ ತನಿಖೆಯಲ್ಲಿ ಈ ಅಂಶ ಬಯಲಾಗಿದೆ. ಕೇವಲ...
- Advertisement -
error: Content is protected !!