Tuesday, April 13, 2021

ಸದ್ದುಮಾಡುತ್ತಿದೆ ಶೇಖರ್ ಕಪೂರ್ ಟ್ವೀಟ್: ಸುಶಾಂತ್ ಆತ್ಮಹತ್ಯೆ ಇನ್ನಷ್ಟು ನಿಗೂಢ

* ಸುಶಾಂತ್ ಸಾವಿನ ಆಘಾತದಿಂದ ಅವರ ಅತ್ತಿಗೆಯೂ ಪ್ರಾಣ ಬಿಟ್ಟರು!

ಮುಂಬೈ: ಉದಯೋನ್ಮುಖ ಚಿತ್ರನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿಂದೆಯೇ ಹಿಂದಿ ಚಿತ್ರರಂಗದಲ್ಲಿ ಗಟ್ಟಿಯಾಗಿ ಬೇರೂರಿರುವ ಮಾಫಿಯಾ ಸಂಸ್ಕೃತಿ ವಿರುದ್ಧ ಧ್ವನಿ ಕೇಳಿ ಬರುತ್ತಿದೆ. ಖ್ಯಾತ ಚಿತ್ರ ನಿರ್ದೇಶಕ ಶೇಖರ್ ಕಪೂರ್ ನಿನ್ನೆ ಮತ್ತು ಇಂದು ಮಾಡಿರುವ ಟ್ವೀಟ್ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ಸುಶಾಂತ್ ಸಿಂಗ್ ರಜಪೂತ್ ಅವರ ನಿಧನದ ಬಗ್ಗೆ ಶೇಖರ್ ಕಪೂರ್ ಅತ್ಯಂತ ಭಾವಾನಾತ್ಮಕ ಟ್ವೀಟ್ ಮಾಡಿದ್ದಾರೆ.  ನೀನು ಅನುಭವಿಸುತ್ತಿದ್ದ ನೋವು ನನಗೆ ಗೊತ್ತಿತ್ತು, ನಿನ್ನನ್ನು ಅಧಪತನಕ್ಕೆ ತಳ್ಳಿದ ಹಲವರ ಕಥೆಯೂ ಗೊತ್ತಿತ್ತು. ನೀನು ನನ್ನ ಹೆಗಲ ಮೇಲೆ ಮುಖ ಇರಿಸಿ ಅಳುತ್ತಿದ್ದೆ. ನಿನಗೆ ಏನಾಗಿದೆಯೊ ಅದು ಅವರ ಕರ್ಮ, ನಿನ್ನದಲ್ಲ ಎಂದು ಶೇಖರ್ ಕಪೂರ್ ಅಕ್ಷರಗಳಿಗೆ ಭಾವನೆಗಳನ್ನು ತುಂಬಿದ್ದಾರೆ. ಕೆಲವು ಒಪ್ಪಂದಗಳಿಂದಾಗಿ ಕಳೆದ ಆರು ತಿಂಗಳಲ್ಲಿ ಕನಿಷ್ಟ ಏಳು ಚಿತ್ರಗಳನ್ನು ಸುಶಾಂತ್ ಕೈಬಿಡಬೇಕಾಯಿತು ಎಂಬ ಮಾತು ಕೂಡ ಕೇಳಿಬರುತ್ತಿದೆ. ಇದರಿಂದಾಗಿ ಸುಶಾಂತ್ ಸಿಂಗ್ ರಜಪೂತ್ ಮಾನಸಿಕ ಒತ್ತಡಕ್ಕೆ ಸಿಲುಕಿದ್ದರು ಎಂದು ಹೇಳಲಾಗುತ್ತಿದೆ. ಕಂಗನಾ ರಣಾವತ್ ಕೂಡ ಹಿಂದಿ ಚಿತ್ರರಂಗದ ಮಾಫಿಯಾ ಸಂಸ್ಕೃತಿ ವಿರುದ್ಧ  ಧ್ವನಿ ಎತ್ತಿದ್ದಾರೆ. ಈ ಮಧ್ಯೆ, ಸುಶಾಂತ್ ಸಿಂಗ್ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಸುಶಾಂತ್ ಸಾವಿನ  ಸುದ್ದಿ ಕೇಳಿ ಅವರ ಅತ್ತಿಗೆ ಸುಶಾ ದೇವಿ ಸಾವನ್ನಪ್ಪಿದ್ದಾರೆ. ಬಿಹಾರದ ಪುರ್ನಿಯಾದಲ್ಲಿ ವಾಸವಾಗಿದ್ದ ಅತ್ತಿಗೆ ಸುಶಾ, ಸುಶಾಂತ್ ಸಾವಿನ ಸುದ್ದಿ ತಿಳಿದ ಬಳಿಕ ಏನನ್ನೂ ಸೇವಿಸಿರಲಿಲ್ಲ. ಅವರು ತೀವ್ರ ಅಸ್ವಸ್ಥರಾಗಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಚಿಕಿತ್ಸೆ ನಿರಾಕರಿಸಿದ ಮಲ್ಯ ಆಸ್ಪತ್ರೆ, ಫುಟ್’ಪಾತ್’ನಲ್ಲೇ 8 ಗಂಟೆ ಕಳೆದ ಕೊರೋನಾ ಸೋಂಕಿತೆ

newsics.comಬೆಂಗಳೂರು: ಡಯಾಲಿಸಿಸ್‌ಗೆ ಬಂದ‌ ಮಹಿಳೆಗೆ ಕೊರೋನಾ ಸೋಂಕಿದೆ ಎಂದು ಮಲ್ಯ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿದ್ದರಿಂದ ಆ ಮಹಿಳೆ ಪುಟ್'ಪಾತ್'ನಲ್ಲೇ ಎಂಟು ಗಂಟೆ ಕಳೆದಿದ್ದಾರೆ.ಬಸವನಗುಡಿ...

ಮೀನುಗಾರಿಕಾ ಬೋಟ್ ದುರಂತ: ಇಬ್ಬರ ಸಾವು, 12 ಮೀನುಗಾರರು ನಾಪತ್ತೆ

newsics.comಮಂಗಳೂರು(ದಕ್ಷಿಣ ಕನ್ನಡ): ಮೀನುಗಾರಿಕಾ ಬೋಟ್ ದುರಂತದಲ್ಲಿ  ಇಬ್ಬರು ಸಾವನ್ನಪ್ಪಿದ್ದು, 12 ಮೀನುಗಾರರು ನಾಪತ್ತೆಯಾಗಿರುವ ಘಟನೆ ಮಂಗಳೂರು ಬಂದರಿನಲ್ಲಿ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲಿ ದೂರದಲ್ಲಿ...

ಭಾರತದಲ್ಲಿ ಈ ಬಾರಿ ಕೂಡ ಸಾಮಾನ್ಯ ಮುಂಗಾರು: ಸ್ಕೈಮೆಟ್ ಭವಿಷ್ಯ

newsics.com ಪುಣೆ: ಸತತ ಮೂರನೆ ವರ್ಷ ಕೂಡ ಭಾರತದಲ್ಲಿ  ಸಾಮಾನ್ಯ ಮುಂಗಾರು ಮಳೆ ಸುರಿಯಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈ ಮೆಟ್ ಭವಿಷ್ಯ ನುಡಿದಿದೆ. ಜೂನ್ ನಿಂದ ಆರಂಭವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಕೊನೆಗೊಳ್ಳುವ ಮುಂಗಾರು...
- Advertisement -
error: Content is protected !!