newsics.com
ತಿರುವನಂತಪುರಂ: ಮೂವತ್ತು ಕಿಲೋ ಚಿನ್ನ ಕಳ್ಳ ಸಾಗಾಟದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅಸ್ವಸ್ಥರಾಗಿದ್ದಾರೆ. ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ತ್ರಿಶ್ಯೂರಿನ ಮೆಡಿಕಲ್ ಕಾಲೇಜಿನಲ್ಲಿ ಅವರನ್ನು ದಾಖಲು ಮಾಡಲಾಗಿದೆ. ಸ್ವಪ್ನಾ ಸುರೇಶ್ ಅವರಿಗೆ ಆಸ್ಪತ್ರೆಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.
ವೈಯ್ಯೂರ್ ಜೈಲಿನಲ್ಲಿ ಇರಿಸಲಾಗಿರುವ ಸ್ವಪ್ನಾ ಸುರೇಶ್ ಅವರನ್ನು ಇದೀಗ ಎರಡನೆ ಬಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ವಾರ ಕೂಡ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಈ ಮಧ್ಯೆ ಕೇರಳ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ತೀವ್ರಗೊಳಿಸಿದೆ. ಹಿರಿಯ ಸಚಿವರೊಬ್ಬರ ಪುತ್ರ ಸ್ವಪ್ನಾ ಸುರೇಶ್ ಮಾದರಿಯಲ್ಲಿ ಬೃಹತ್ ಮೊತ್ತವನ್ನು ಕಮಿಷನ್ ರೂಪದಲ್ಲಿ ಪಡೆದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.