ತಿರುವನಂತಪುರಂ:ಕೇರಳದಲ್ಲಿ ಕೋಲಾಹಲ ಸೃಷ್ಟಿಸಿರುವ 30 ಕೋಟಿ ರೂಪಾಯಿ ಚಿನ್ನ ಕಳ್ಳ ಸಾಗಾಟ ಪ್ರಕರಣದ ಆರೋಪಿಗಳಾದ ಸ್ವಪ್ನಾ ಸುರೇಶ್ ಮತ್ತು ಸಂದೀಪ್ ನಾಯರ್ ಕಸ್ಟಡಿ ಅವಧಿಯನ್ನು ವಿಸ್ತರಿಸಲಾಗಿದೆ, ಇನ್ನೂ ನಾಲ್ಕು ದಿನಗಳ ಕಾಲ ಇಬ್ಬರು ಆರೋಪಿಗಳು ರಾಷ್ಟ್ರೀಯ ತನಿಖಾದಳ ಕಸ್ಟಡಿಯಲ್ಲಿ ಇರಲಿದ್ದಾರೆ. ಶುಕ್ರವಾರ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ.
ಆರೋಪಿಗಳು ವಾಸವಿದ್ದ ಅಪಾರ್ಟ್ ಮೆಂಟ್ ಗೆ ತೆರಳಿ ಸಾಕ್ಷ್ಯ ಸಂಗ್ರಹಿಸುವ ಕಾರ್ಯ ಕೂಡ ನಡೆದಿದೆ. ಚಿನ್ನ ಮಾರಾಟ ಬಂದ ಹಣವನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸಲಾಗಿತ್ತೆ ಎಂಬ ಬಗ್ಗೆ ರಾಷ್ಟ್ರೀಯ ತನಿಖಾದಳ ತನಿಖೆ ನಡೆಸುತ್ತಿದೆ. ಕೇರಳದ ಹಲವು ಚಿನ್ನದ ವ್ಯಾಪಾರಿಗಳ ಚಟುವಟಿಕೆಯ ಮೇಲೂ ಕಣ್ಗಾವಲು ಇರಿಸಲಾಗಿದೆ.
ಈ ಮಧ್ಯೆ ದುಬೈ ಪೊಲೀಸರ ವಶದಲ್ಲಿರುವ ಪ್ರಮುಖ ಆರೋಪಿ ಫೈಸಲ್ ಫರೀದ್ ನನ್ನು ಭಾರತಕ್ಕೆ ಕರೆ ತರುವ ಪ್ರಯತ್ನ ಮುಂದುವರಿದಿದೆ.ಕೊರೋನಾದಿಂದಾಗಿ ಈ ಗಡೀಪಾರು ಪ್ರಕ್ರಿಯೆ ಸ್ವಲ್ಪವಿಳಂಬವಾಗಿದೆ