newsics.com
ಚೆನ್ನೈ: ಬಿಹಾರ ಮೂಲದ ನಟ ಅಕ್ಷತ್ ಉತ್ಕರ್ಷ್ ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಕೌಟುಂಬಿಕ ಕಲಹಕ್ಕೆ ಬೇಸತ್ತು ತಮಿಳು ಚಿತ್ರರಂಗದ ಉದಯೋನ್ಮುಖ ನಟ ತೆನ್ನರಸು ಮಂಗಳವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಚೆನ್ನೈನ ಮೈಲಾಪೊರ್ ನಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 2012ರಲ್ಲಿ ಬಿಡುಗಡೆಯಾಗಿದ್ದ ಮರೀನಾ ಸಿನಿಮಾ ಮೂಲಕ ತೆನ್ನರಸು ಸಾಕಷ್ಟು ಜನಪ್ರಿಯತೆ ಪಡೆದಿದ್ದರು. ಮೂರು ವರ್ಷಗಳ ಹಿಂದಷ್ಟೇ ತೆನ್ನರಸು ತಮ್ಮ ಗೆಳತಿಯೊಂದಿಗೆ ವಿವಾಹವಾಗಿದ್ದರು. ಅವರಿಗೆ 2 ವರ್ಷದ ಮಗು ಕೂಡ ಇದೆ. ಪತಿ-ಪತ್ನಿಯ ನಡುವೆ ಆಗಾಗ ಜಗಳವಾಗುತ್ತಿತ್ತು. ಇಂದೂ ಕೂಡ ಪತ್ನಿ ಜತೆ ಜಗಳವಾಡಿದ್ದ ನಟ ಬಳಿಕ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ಸೀಲಿಂಗ್ ಫ್ಯಾನ್’ಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ.
ಬಿಹಾರ್ ಮೂಲದ ನಟ ಮುಂಬೈನಲ್ಲಿ ಆತ್ಮಹತ್ಯೆ