Wednesday, July 6, 2022

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ತಮಿಳುನಾಡು ಅಪಸ್ವರ

Follow Us

ಚೆನ್ನೈ: ಕೇಂದ್ರ ಸರ್ಕಾರದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ತಮಿಳುನಾಡು ತೀವ್ರ ವಿರೋಧ ವ್ಯಕ್ತಪಡಿಸಿದೆ. ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಬಹಿರಂಗವಾಗಿಯೇ ಇದನ್ನು ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಪಳನಿಸ್ವಾಮಿ, ತಮಿಳುನಾಡಿನಲ್ಲಿ ತ್ರಿ ಭಾಷಾ ಸೂತ್ರ ಜಾರಿ ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬದಲಾವಣೆ ಅನಿವಾರ್ಯ. ಇದನ್ನು ಸ್ಛಳೀಯ ಅಗತ್ಯಕ್ಕೆ ಅನುಸಾರವಾಗಿ ಬದಲಾಯಿಸುವ ಸ್ವಾತಂತ್ರ್ಯವನ್ನು ರಾಜ್ಯಗಳಿಗೆ ನೀಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಒತ್ತಾಯಿಸಿದ್ದಾರೆ.

ತಮಿಳುನಾಡಿನಲ್ಲಿ ಇದೀಗ ಜಾರಿಯಲ್ಲಿರುವ ದ್ವಿ ಭಾಷಾ ಸೂತ್ರ ಮುಂದುವರಿಸುವುದೇ ಸೂಕ್ತ. ತಮಿಳುನಾಡಿನ ಜನರು ಇತರ ಭಾಷೆಗಳನ್ನು ಹೇರುವುದನ್ನು  ಒಪ್ಪಿಕೊಳ್ಳಲಾರರು ಎಂದು ಮುಖ್ಯಮಂತ್ರಿ ಪಳನಿಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಚಾಕಲೇಟ್ ಕವರ್ ನಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್: ನಾಲ್ವರ ಸೆರೆ

newsics.com ಬೆಂಗಳೂರು:  ವಿದ್ಯಾರ್ಥಿಗಳಿಗೆ ಚಾಕಲೇಟ್ ಕವರ್ ನಲ್ಲಿ ಅಡಗಿಸಿ ಡ್ರಗ್ಸ್ ಪೂರೈಸುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರಿನ  ಆವಲ ಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು  ಮೊಹಮ್ಮದ್ ಅಸ್ಲಾಂ, ...

ಒಟಿಪಿ ನೀಡುವ ವಿಷಯಕ್ಕೆ ಜಗಳ: ಪ್ರಯಾಣಿಕನ ಹತ್ಯೆ ಮಾಡಿದ ಕ್ಯಾಬ್ ಚಾಲಕ

newsics.com ಚೆನ್ನೈ: ಕಾರನ್ನು ಬಾಡಿಗೆಗೆ ನಿಗದಿಪಡಿಸಿ ಪ್ರಯಾಣ ಆರಂಭಿಸುವ ಮೊದಲು ಒಟಿಪಿ ನೀಡುವ ಜಗಳ ಪ್ರಯಾಣಿಕನ ಕೊಲೆಯಲ್ಲಿ ಅಂತ್ಯವಾಗಿದೆ. ಚೆನ್ನೈ ನಗರದ ನವಲೂರಿನಲ್ಲಿ ಈ ಘಟನೆ ನಡೆದಿದೆ. ಸಾಫ್ಟವೇರ್ ಡೆವಲಪರ್ ಆಗಿರುವ...

ದೇಶದಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು, 28 ಜನರ ಸಾವು

newsics.com ನವದೆಹಲಿ:  ದೇಶದಲ್ಲಿ ಕೊರೋನಾದ ಹಾವಳಿ ಮುಂದುವರಿದಿದೆ.  ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದೇ ವೇಳೆ ಕೊರೋನಾ ಸೋಂಕಿತರಾಗಿದ್ದ 15,394 ಮಂದಿ ಗುಣಮುಖರಾಗಿದ್ದಾರೆ. ಕೊರೋನಾದಿಂದ ಕಳೆದ 24 ಗಂಟೆ...
- Advertisement -
error: Content is protected !!