ಚೆನೈ: ಲಾಕ್ಡೌನ್ ಘೋಷಣೆಯಾದಾಗಿನಿಂದ ಸ್ಥಗಿತಗೊಂಡಿದ್ದ ರೈಲು ಸೇವೆಗಳು ಪುನರಾರಂಭಗೊಳ್ಳಲಿದ್ದು, ಚೆನೈನಿಂದ ಕರ್ನಾಟಕ,ಕೇರಳ ಹಾಗೂ ಇತರ ಸ್ಥಳಗಳಿಗೆ ರೈಲು ಸಂಪರ್ಕ ಆರಂಭವಾಗಲಿದೆ.
ನೈಋತ್ಯ ರೈಲ್ವೆ ಈ ರೈಲುಗಳನ್ನು ಪುನರಾರಂಭ ಮಾಡಲು ಅವಕಾಶ ನೀಡಿದ್ದು, ಚೆನೈನಿಂದ ತಿರುವನಂತಪುರಂ,ಮಂಗಳೂರು,ಮೈಸೂರು ಸೇರಿದಂತೆ ಹಲವು ನಗರಳಿಗೆ ರೈಲು ಸಂಚರಿಸಲಿದೆ.
ಸೆಪ್ಟೆಂಬರ್ 7 ರಿಂದ ತಮಿಳುನಾಡು ಸರ್ಕಾರ ರಾಜ್ಯದೊಳಗೆ ರೈಲು ಸಂಚಾರ ಆರಂಭಿಸಿತ್ತು.
ಈಗ ಅಂತರರಾಜ್ಯ ರೈಲು ಸೇವೆ ಆರಂಭಿಸಿದ್ದು, ಕೊರೋನಾ ಸಂಕಷ್ಟದಿಂದ ಈ ರೈಲುಗಳಲ್ಲಿ ಸಂಚರಿಸುವವರು 90 ನಿಮಿಷ ಮೊದಲು ನಿಲ್ದಾಣಕ್ಕೆ ಆಗಮಿಸಿ ಸ್ಯಾನಿಟೈಸ್ ಮಾಡಿಕೊಳ್ಳುವುದು ಸೇರಿದಂತೆ ವಿವಿಧ ಪ್ರಕ್ರಿಯೆಗೆ ಒಳಗಾಗಬೇಕೆಂದು ರೈಲ್ವೈ ಇಲಾಕೆ ಪ್ರಕಟಣೆ ಹೇಳಿದೆ.
ಸೆ.28 ರಿಂದ ಮತ್ತೆ ಚೆನೈನಿಂದ ಕರ್ನಾಟಕಕ್ಕೆ ಸಂಚರಿಸಲಿದೆ ರೈಲು
Follow Us