newsics.com
ರಾಜಸ್ಥಾನ: ಇಲ್ಲಿನ ಮಾಟಗಾರನೊಬ್ಬ ಏಳು ವರ್ಷದ ಬಾಲಕನ ಜ್ವರ ಮತ್ತು ಶೀತ ಗುಣಪಡಿಸುವುದಾಗಿ ಹೇಳಿ ಬಿಸಿಯಾದ ಕಬ್ಬಿಣದ ರಾಡ್ ಮುಟ್ಟಿಸಿದ್ದಾನೆ.
ಬಿಸಿ ರಾಡ್ ಮುಟ್ಟಿಸಿದ ಪರಿಣಾಮ ಬಾಲಕನ ಅರೋಗ್ಯ ಹದಗೆಟ್ಟಿದ್ದು, ಆತನನ್ನು ಭಿಲ್ವಾರಾದ ಮಹಾತ್ಮ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ಮಾಟಗಾರನ ವಿರುದ್ಧ ಪ್ರಕರಣ ದಾಖಲಿಸಿ, ಬಾಲಕನ ಪೋಷಕರ ಹೇಳಿಕೆಗಳನ್ನು ದಾಖಲಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಲು ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.