newsics.com
ನವದೆಹಲಿ: 18,000 ಕೋಟಿ ರೂ.ಗಳ ಬಿಡ್ ನಲ್ಲಿ ಟಾಟಾ ಗ್ರೂಪ್ ಏರ್ ಇಂಡಿಯಾದ ವಿಜೇತ ಬಿಡ್ಡರ್ ಆಗಿದೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
18,718 ಕೋಟಿ ಮೊತ್ತಕ್ಕೆ ಬಿಡ್ ಪಡೆದಿದ್ದ ಟಾಟಾ ಗ್ರೂಪ್ ಗೆ ಕೊನೆಗೂ ಏರ್ ಇಂಡಿಯಾ ಸೇರಿದೆ.
ಕೇಂದ್ರ ಗೃಹ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 2022ರ ಒಳಗಾಗಿ ಏರ್ ಇಂಡಿಯಾ ಶೇರ್ ಗಳ ವಾಪಸಾತಿಗೂ ಸರ್ಕಾರ ಒಪ್ಪಿದ್ದು, ಆ ಮೂಲಕ 68 ವರ್ಷಗಳ ಸರ್ಕಾರದ ನಿಯಂತ್ರಣ ಕೊನೆಯಾಗಲಿದೆ.
ಏರ್ ಇಂಡಿಯಾ ಕುರಿತು ಸಲ್ಲಿಸಲಾಗಿದ್ದ ಹಲವು ಬಿಡ್ ಗಳಲ್ಲಿ, ಕೊನೆಗೂ ಟಾಟಾ ಗ್ರೂಪ್ ಏರ್ ಇಂಡಿಯಾವನ್ನು ತನ್ನ ತೆಕ್ಕೆಗೆ ಪಡೆಯುವಲ್ಲಿ ಯಶಸ್ವಿಯಾಗಿದೆ.