ಕೋಲ್ಕತಾ: ತನಗೆ ಸೇರಿದ ಭೂಮಿಯಲ್ಲಿ ರಸ್ತೆ ನಿರ್ಮಿಸಲು ಮುಂದಾದ ಪಂಚಾಯತ್ ಮುಖಂಡರ ವಿರುದ್ಧ ಪ್ರತಿಭಟನೆ ನಡೆಸಿದ್ದ ಶಿಕ್ಷಕಿಯ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ನಂತರ ರಸ್ತೆಯ ಮೇಲೆ ಎಳೆದೊಯ್ದು ಹಲ್ಲೆ ನಡೆಸಿರುವ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್ ಪುರ್ ನ ಗಂಗ್ರಾಮ್ ಪುರ್ ಎಂಬಲ್ಲಿ ನಡೆದಿದೆ.
ಗಂಗ್ರಾಮ್ ಪುರ್ ಪಂಚಾಯತ್ ನ ತೃಣಮೂಲ ಕಾಂಗ್ರೆಸ್ ಮುಖಂಡ ಅಮಲ್ ಸರ್ಕಾರ್ ಸೇರಿ ಹಲವರ ಗುಂಪು ಶಿಕ್ಷಕಿಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ.
ಶಿಕ್ಷಕಿಯ ಸಹೋದರಿಯ ಮೇಲೂ ಹಲ್ಲೆ ನಡೆಸಲಾಗಿದೆ. ಮನೆ ಮುಂಭಾಗದಲ್ಲಿ ರಸ್ತೆ ನಿರ್ಮಾಣಕ್ಕಾಗಿ 12 ಅಡಿ ಅಗಲ ಜಾಗ ನೀಡುವುದಾಗಿ ಶಿಕ್ಷಕಿ ತಿಳಿಸಿದ್ದರು. ಆದರೆ ಪಂಚಾಯತ್ ಮುಖಂಡ ಮತ್ತು ಸದಸ್ಯರು ರಸ್ತೆಗೆ 24 ಅಡಿ ಜಾಗ ನೀಡಬೇಕೆಂದು ನಿರ್ಣಯ ಕೈಗೊಂಡಿದ್ದರು. ಘಟನೆ ಬಗ್ಗೆ ಶಿಕ್ಷಕಿ ಐವರ ವಿರುದ್ಧ ದೂರು ದಾಖಲಿಸಿದ್ದು, ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶಿಕ್ಷಕಿಯ ಕೈಕಾಲು ಕಟ್ಟಿ ರಸ್ತೆಯಲ್ಲೇ ಎಳೆದೊಯ್ದರು…!
Follow Us