Thursday, January 21, 2021

ತೃತೀಯ ಲಿಂಗಿ ಮಕ್ಕಳ ಬಗ್ಗೆ ಶಿಕ್ಷಕರಿಗೆ ಪಾಠ!

ನವದೆಹಲಿ: ಗಂಡು, ಹೆಣ್ಣು ಮಾತ್ರವಲ್ಲದೆ ತೃತೀಯ ಲಿಂಗಿ‌ ಮಕ್ಕಳಿಗೂ ಮುಕ್ತವಾದ ಹಾಗೂ ಸಮಾನವಾದ ಶಿಕ್ಷಣ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಶಿಕ್ಷಕರಿಗೆ ತೃತೀಯ ಲಿಂಗಿ ಮಕ್ಕಳ ಕುರಿತು ತಿಳಿವಳಿಕೆ ‌ಮೂಡಿಸುವ ಪ್ರಯತ್ನ ಆರಂಭವಾಗಿದೆ.
ಉತ್ತರ ದೆಹಲಿಯ ಮುನ್ಸಿಪಲ್ ಕೌನ್ಸಿಲ್ ಇಂತಹದೊಂದು ವಿಭಿನ್ನ ಪ್ರಯತ್ನಕ್ಕೆ ಮುಂದಡಿ ಇಟ್ಟಿದ್ದು, ಆಯ್ದ ಶಾಲಾ ಶಿಕ್ಷಕರಿಗೆ ಪ್ರತಿನಿತ್ಯ ಒಂದು ಗಂಟೆಗಳ ತರಬೇತಿ ತರಗತಿ ತೆಗೆದುಕೊಳ್ಳಲಾಗುತ್ತಿದ್ದು, ಇದರಲ್ಲಿ ತೃತೀಯ ‌ಲಿಂಗಿ‌ಮಕ್ಕಳ‌ ಮನಸ್ಥಿತಿ, ಅವರ ದೈಹಿಕ, ಮಾನಸಿಕ ಕ್ಷಮತೆ, ಅವರನ್ನು ತರಗತಿಯಲ್ಲಿ ಹೇಗೆ ನಡೆಸಿಕೊಳ್ಳಬೇಕು ಸೇರಿದಂಗೆ ಸಮಗ್ರವಾಗಿ ಟ್ರಾನ್ಸಜೆಂಡರ್ ಐಡೆಂಟಿಟಿ ಕುರಿತು ತಿಳಿಸುವ ಪ್ರಯತ್ನ ನಡೆದಿದೆ.

ಮನುಷ್ಯರ ಮೇಲಿನ ಕೊರೋನಾ ಲಸಿಕೆ ಪ್ರಯೋಗ ಯಶಸ್ವಿ

ಒಂದೊಂದು ತರಬೇತಿ ಕ್ಲಾಸ್ 250 ಶಿಕ್ಷಕರನ್ನು ಒಳಗೊಂಡಿದ್ದು ಇವರಿಗೆ ಹಲವು ವರ್ಷಗಳಿಂದ ತೃತೀಯ ಲಿಂಗಿಗಳ ಕುರಿತು ಅಧ್ಯಯನ ನಡೆಸುತ್ತಿರುವ ಸ್ಪೇಸ್ ಎನ್ ಜಿಓ ಮಾರ್ಗದರ್ಶನ ನೀಡುತ್ತಿದೆ.
ಈಗಾಗಲೇ 1000ಕ್ಕೂ ಅಧಿಕ ಶಿಕ್ಷಕರಿಗೆ ಟ್ರೇನಿಂಗ್ ನೀಡಲಾಗಿದೆ. ಈ ಕಾರ್ಯಕ್ರಮ ದ ಉದ್ದೇಶ, ಲಿಂಗಬೇಧವಿಲ್ಲದೇ ಎಲ್ಲ ಮಕ್ಕಳಿಗೂ ಸಮಾನವಾದ ಶಿಕ್ಷಣದ ಅವಕಾಶ ಸಿಗಬೇಕು‌. ತೃತೀಯ ಲಿಂಗಿ ಮಕ್ಕಳು ಎಂಬ ಕಾರಣಕ್ಕೆ ಅವರು ಶಿಕ್ಷಣದ ಯಾವುದೇ ಚಟುವಟಿಕೆ ಅಥವಾ ಸಹಜತೆ ಯಿಂದ ವಿಮುಖವಾಗಬಾರದು ಎಂಬುದು ನಮ್ಮ ಉದ್ದೇಶ ಅಂತಿದೆ ಉತ್ತರ ದೆಹಲಿಯ ಮುನ್ಸಿಪಲ್ ಕೌನ್ಸಿಲ್.

ಮತ್ತಷ್ಟು ಸುದ್ದಿಗಳು

Latest News

ಭಾರತಕ್ಕೆ ಮರಳಿದ ಕ್ರಿಕೆಟ್ ಆಟಗಾರರು,ಸಂತಸ ಹಂಚಿಕೊಂಡ ಪಂತ್

Newsics.com ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಜಯಗಳಿಸಿ ತಿವಿಕ್ರಮ ಮೆರೆದ ಭಾರತದ ಕ್ರಿಕೆಟ್ ಆಟಗಾರರಲ್ಲಿ ಹೆಚ್ಚಿನವರು ಸ್ವದೇಶಕ್ಕೆ ಹಿಂತಿರುಗಿದ್ದಾರೆ. ರೋಹಿತ್ ಶರ್ಮಾ, ಅಜಿಂಕ್ಯಾ ರೆಹಾನೆ ಮತ್ತು...

ಅತಿಥಿ ಉಪನ್ಯಾಸಕರ ನೇಮಕಾತಿಗೆ ಅನುಮತಿ

newsics.com ಬೆಂಗಳೂರು: ಶೇ.50ರಷ್ಟು ಅತಿಥಿ ಉಪನ್ಯಾಸಕರ ನೇಮಕಾತಿಗೆ ಕಾಲೇಜು ಶಿಕ್ಷಣ ಇಲಾಖೆ ಅನುಮತಿ ನೀಡಿದೆ.ಜನವರಿ 15 ರಿಂದ ಭೌತಿಕ ತರಗತಿಗಳು ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಅನುಗುಣವಾಗಿ ಪಾಠ ಮಾಡಲು ಅತಿಥಿ ಉಪನ್ಯಾಸಕರನ್ನು...

ಹೊಸ ದಾಖಲೆ ಬರೆದ ಷೇರುಪೇಟೆ; 50 ಸಾವಿರ ಗಡಿ ದಾಟಿದ ಸೂಚ್ಯಂಕ

newsics.com ಮುಂಬೈ: ಷೇರುಪೇಟೆ ಸೂಚ್ಯಂಕ 50 ಸಾವಿರ ಗಡಿ ದಾಟುವ ಮೂಲಕ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆ ಸೃಷ್ಠಿಯಾಗಿದೆ.ಕೊರೋನಾ ಸಂಕಷ್ಟದ ನಡುವೆಯೂ ಷೇರುಪೇಟೆ ಸೂಚ್ಯಂಕ ದಾಖಲೆ ಬರೆದಿದ್ದು, ಇದೇ...
- Advertisement -
error: Content is protected !!