newsics.com
ಯುಎಇ: ಭಾರತೀಯ ಕ್ರಿಕೆಟ್ ತಂಡದ ಹೊಸ ಜರ್ಸಿ ದುಬೈನಲ್ಲಿರುವ ಬುರ್ಜ್ ಖಲೀಫಾದಲ್ಲಿ ಕಂಗೊಳಿಸಿದೆ.
ಟೀಂ ಇಂಡಿಯಾದ ಅಧಿಕೃತ ಕಿಟ್ ಪ್ರಾಯೋಜಕರಾದ ಎಂಪಿಎಲ್ ಸ್ಪೋರ್ಟ್ಸ್, ತಂಡದ ‘ಬಿಲಿಯನ್ ಚೀರ್ಸ್ ಜರ್ಸಿ’ ಯನ್ನು ದುಬೈನಲ್ಲಿರುವ ಬುರ್ಜ್ ಖಲೀಫಾದಲ್ಲಿ ಪ್ರದರ್ಶಿಸಿದೆ.
https://twitter.com/i/status/1448520704589119493
ಭಾರತೀಯ ಕ್ರಿಕೆಟ್ ತಂಡದ ಹೊಚ್ಚ ಹೊಸ ಜರ್ಸಿಯನ್ನು ನೋಡಲು ಕಾತುರದಿಂದ ಕಾಯುತ್ತಿದ್ದ ಕ್ರಿಕೆಟ್ ಅಭಿಮಾನಿಗಳು ಬುರ್ಜ್ ಖಲೀಫಾದಲ್ಲಿ ಜರ್ಸಿಯನ್ನು ಕಣ್ತುಂಬಿಕೊಂಡಿದ್ದಾರೆ.
ಎಂಪಿಎಲ್ ಸ್ಪೋರ್ಟ್ಸ್ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.