newsics.com
ನವದೆಹಲಿ: ಇದೀಗ ಸ್ನ್ಯಾಪ್ ಚಾಟ್ನಲ್ಲೂ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದೆ. ಹಲವು ಬಳಕೆದಾರರು ಈ ಸಂಬಂಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ನ್ಯಾಪ್ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರು ನೀಡಿದ್ದಾರೆ.
ಸರ್ವರ್ ಸಮಸ್ಯೆ ತಲೆದೋರಿದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ತಾಂತ್ರಿಕ ಸಮಸ್ಯೆ ಬಗೆಹರಿಸಲಾಗಿದೆ ಎಂದು ಸ್ನ್ಯಾಪ್ ಚಾಟ್ ಹೇಳಿದೆ.
ಇತ್ತೀಚೆಗೆ ಫೇಸ್ ಬುಕ್ ಕೂಡ ಇದೇ ರೀತಿಯ ಸಮಸ್ಯೆಗೆ ಗುರಿಯಾಗಿತ್ತು. ವಾರದಲ್ಲಿ ಎರಡು ಬಾರಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತ್ತು.