newsics.com
ಕೇರಳ: ಕೇರಳದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿದ್ದು, ಪರಿಣಾಮವಾಗಿ 2019ರಲ್ಲಿ 20,995 ಹದಿಹರೆಯದ ಯುವತಿಯರು ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂಬ ವಿಚಾರ ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿಯಿಂದ ಬಹಿರಂಗವಾಗಿದೆ.
2018ರಲ್ಲೂ 20,461 ಹದಿಹರೆಯದ ಯುವತಿಯರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದು ಕೇರಳದಲ್ಲಿರುವ ಬಾಲ್ಯವಿವಾಹ ಮತ್ತು ಹದಿಹರೆಯದ ಯುವತಿಯರ ಗರ್ಭಧಾರಣೆಯ ಕುರಿತು ತಿಳಿಸುತ್ತಿದೆ.
15 ರಿಂದ 19 ವಯಸ್ಸಿನ 10,613 ಹುಡುಗಿಯರು ನಗರ ಪ್ರದೇಶಗಳಲ್ಲಿ ಮತ್ತು 5,747 ಹುಡುಗಿಯರು ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಗೆ ಜನ್ಮ ನೀಡಿರುವುದು ತಿಳಿದು ಬಂದಿದೆ.