Wednesday, June 16, 2021

ತೆಲಂಗಾಣ ಘರ್ಷಣೆ: 13 ಮನೆಗಳಿಗೆ ಬೆಂಕಿ

ಹೈದರಾಬಾದ್: ಎರಡು ಸಮುದಾಯಗಳ ನಡುವೆ ಹೊಡೆದಾಟ ನಡೆದು 8 ಪೊಲೀಸರು ಸೇರಿ 19 ಜನರು ಗಾಯಗೊಂಡ ಘಟನೆ ತೆಲಂಗಾಣದ ಆದಿಲಾಬಾದ್ ನಲ್ಲಿ ನಡೆದಿದೆ. 13 ಮನೆಗಳಿಗೆ ಬೆಂಕಿ ಹಚ್ಚಿದ್ದು, 26 ವಾಹನಗಳು ಬೆಂಕಿಗಾಹುತಿಯಾಗಿ ವೆ.
ಬುಧವಾರದವರೆಗೆ ನಿಷೇಧಾಜ್ಞೆ ಹೇರಲಾಗಿದೆ. ಅದಿಲಾಬಾದ್ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
ಭಾನುವಾರ ರಾತ್ರಿ ಅದಿಲಾಬಾದ್ ನ ಭಾಯಿನ್ಸಾ ಪ್ರದೇಶದಲ್ಲಿ ಯುವಕರು ಬೈಕ್ ಸೈಲೆನ್ಸರ್ ತೆಗೆದು ಶಬ್ದ ಮಾಡುತ್ತಿರುವುದನ್ನು ಕೆಲವು ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.
ಗಲಭೆಗೆ ಸಂಬಂಧಿಸಿದಂತೆ ಪೊಲೀಸರು 60 ಜನರನ್ನು ವಶಕ್ಕೆ ತೆಗೆದುಕೊಂಡಿದ್ದು, ಆರು ಮಂದಿ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಕಾಲು ಬಾಯಿ ರೋಗ: ಸರ್ಕಾರದ ನಿರ್ಲಕ್ಷ್ಯದಿಂದ ಜಾನುವಾರುಗಳಿಗೂ ಸಿಗದ ಲಸಿಕೆ

newsics.com ಬೆಂಗಳೂರು: ರಾಜ್ಯದ ಹಲವೆಡೆ ಜಾನುವಾರುಗಳಲ್ಲಿ ಕಾಲು ಬಾಯಿ ರೋಗ ಕಾಣಿಸಿಕೊಂಡಿದ್ದು, ಲಸಿಕೆ ಸಿಗದ ಕಾರಣ ಜಾನುವಾರುಗಳ ಸ್ಥಿತಿ ಚಿಂತಾಜನಕವಾಗಿದೆ. ಈಗಾಗಲೇ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನಲ್ಲಿ...

ಕೊರೋನಾ 2ನೇ ಅಲೆಯಲ್ಲಿ‌ 730 ವೈದ್ಯರ ಸಾವು: ಐಎಂಎ ಮಾಹಿತಿ

newsics.com ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆಯಲ್ಲಿ ಫ್ರಂಟ್ ಲೈನ್ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ 730 ವೈದ್ಯರು ಜೀವ ಕಳೆದುಕೊಂಡಿದ್ದಾರೆ ಎಂದು ಭಾರತೀಯ ವೈದ್ಯಕೀಯಯ ಸಂಘ(ಐಎಂಎ) ಮಾಹಿತಿ ತಿಳಿಸಿದೆ. ಬಿಹಾರದಲ್ಲಿ 115, ದೆಹಲಿಯಲ್ಲಿ 109,...

ಆರೋಗ್ಯ ಇಲಾಖೆಯ ಕೊರೋ‌ನಾ ಸೋಂಕಿತ, ಸಂಪರ್ಕಿತ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ 10 ದಿನ ವೇತನಸಹಿತ ರಜೆ

newsics.com ಬೆಂಗಳೂರು : ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಕೋವಿಡ್ ಸೋಂಕಿತ, ಸಂಪರ್ಕಿತರಿಗೆ 10 ದಿನ ವೇತನಸಹಿತ ರಜೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರಾದ ಆರುಂಧತಿ ಈ ಆದೇಶ...
- Advertisement -
error: Content is protected !!