Tuesday, April 13, 2021

ಕಿರುತೆರೆ ನಟಿ‌ ದಿವ್ಯ ಚೌಕ್ಸೆ ಕ್ಯಾನ್ಸರ್’ಗೆ ಬಲಿ

ಮುಂಬೈ: ಹಿಂದಿ ಕಿರುತೆರೆ ನಟಿ, ಮಾಡೆಲ್‌ ದಿವ್ಯ ಚೌಕ್ಸೆ ಕ್ಯಾನ್ಸರ್’ಗೆ ಬಲಿಯಾಗಿದ್ದಾರೆ.
ಕೆಲ ತಿಂಗಳಿನಿಂದ ಕ್ಯಾನ್ಸರ್’ನಿಂದ ಬಳಲುತ್ತಿದ್ದ ದಿವ್ಯ ಚೌಕ್ಸೆ ಹೈ ಅಪನಾ ದಿಲ್ ತೋ ಆವಾರಾ ಚಿತ್ರದಲ್ಲಿಯೂ ನಟಿಸಿದ್ದರು.
ದಿವ್ಯ ಸಂಬಂಧಿ ಸೌಮ್ಯ ವರ್ಮಾ ದಿವ್ಯ ನಿಧನ ವಿಚಾರವನ್ನು ಖಚಿತಪಡಿಸಿದ್ದು, ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ದಿವ್ಯ ಸೋತು ಹೋದಳು ಎಂಬರ್ಥದ ಪೋಸ್ಟ್ ಮೂಲಕ ದಿವ್ಯ ಸಾವಿನ ಸಂಗತಿ ಹಂಚಿಕೊಂಡಿದ್ದಾರೆ‌.
ಲಂಡನ್’ನಲ್ಲಿ ಸಿನಿಮಾ ಅಭಿನಯದ ತರಬೇತಿ ಪಡೆದಿದ್ದ ದಿವ್ಯ ಮಾಡೆಲಿಂಗ್’ನಲ್ಲಿ ಗುರುತಿಸಿಕೊಂಡಿದ್ದಳು.
ಹಿಂದಿ ಧಾರಾವಾಹಿ, ಹಲವು ಚಿತ್ರ ಹಾಗೂ ಸಿಂಗರ್ ಆಗಿ ಕೆರಿಯರ್ ಆರಂಭಿಸಿದ್ದ ದಿವ್ಯ ತಮ್ಮ 30 ನೇ ವಯಸ್ಸಿನಲ್ಲಿ ಮಾರಕ ಕ್ಯಾನ್ಸರ್ ಗೆ ಬಲಿಯಾಗಿದ್ದಾಳೆ.
ದಿವ್ಯ ಸಾವಿಗೆ ಬಾಲಿವುಡ್ ನಟ-ನಟಿಯರು ಕಂಬನಿ‌ ಮಿಡಿದಿದ್ದಾರೆ. ಸಾಯುವ 16 ಗಂಟೆ‌ ಮೊದಲು ದಿವ್ಯ ಚೌಕ್ಸೆ ತನ್ನ ಟ್ವೀಟರ್ ಅಕೌಂಟ್’ನಲ್ಲಿ ಕೊನೆಯ ಪೋಸ್ಟ್ ಹಾಕಿದ್ದು, ಅಭಿಮಾನಿಗಳಿಗೆ ತಮ್ಮ ಸಾವಿನ ಸಂದೇಶ ನೀಡಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಚಿಕಿತ್ಸೆ ನಿರಾಕರಿಸಿದ ಮಲ್ಯ ಆಸ್ಪತ್ರೆ, ಫುಟ್’ಪಾತ್’ನಲ್ಲೇ 8 ಗಂಟೆ ಕಳೆದ ಕೊರೋನಾ ಸೋಂಕಿತೆ

newsics.comಬೆಂಗಳೂರು: ಡಯಾಲಿಸಿಸ್‌ಗೆ ಬಂದ‌ ಮಹಿಳೆಗೆ ಕೊರೋನಾ ಸೋಂಕಿದೆ ಎಂದು ಮಲ್ಯ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿದ್ದರಿಂದ ಆ ಮಹಿಳೆ ಪುಟ್'ಪಾತ್'ನಲ್ಲೇ ಎಂಟು ಗಂಟೆ ಕಳೆದಿದ್ದಾರೆ.ಬಸವನಗುಡಿ...

ಮೀನುಗಾರಿಕಾ ಬೋಟ್ ದುರಂತ: ಇಬ್ಬರ ಸಾವು, 12 ಮೀನುಗಾರರು ನಾಪತ್ತೆ

newsics.comಮಂಗಳೂರು(ದಕ್ಷಿಣ ಕನ್ನಡ): ಮೀನುಗಾರಿಕಾ ಬೋಟ್ ದುರಂತದಲ್ಲಿ  ಇಬ್ಬರು ಸಾವನ್ನಪ್ಪಿದ್ದು, 12 ಮೀನುಗಾರರು ನಾಪತ್ತೆಯಾಗಿರುವ ಘಟನೆ ಮಂಗಳೂರು ಬಂದರಿನಲ್ಲಿ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲಿ ದೂರದಲ್ಲಿ...

ಭಾರತದಲ್ಲಿ ಈ ಬಾರಿ ಕೂಡ ಸಾಮಾನ್ಯ ಮುಂಗಾರು: ಸ್ಕೈಮೆಟ್ ಭವಿಷ್ಯ

newsics.com ಪುಣೆ: ಸತತ ಮೂರನೆ ವರ್ಷ ಕೂಡ ಭಾರತದಲ್ಲಿ  ಸಾಮಾನ್ಯ ಮುಂಗಾರು ಮಳೆ ಸುರಿಯಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈ ಮೆಟ್ ಭವಿಷ್ಯ ನುಡಿದಿದೆ. ಜೂನ್ ನಿಂದ ಆರಂಭವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಕೊನೆಗೊಳ್ಳುವ ಮುಂಗಾರು...
- Advertisement -
error: Content is protected !!