ಮುಂಬೈ: ಬಾಲಿವುಡ್ ನಟ ಸುಶಾಂತ್ ಬಳಿಕ ಇದೀಗ ಹಿಂದಿ ಕಿರುತೆರೆಗೆ ಆತ್ಮಹತ್ಯೆ ಸರಣಿ ಕಾಲಿಟ್ಟಿದ್ದು, ಹಿಂದಿ ಕಿರುತೆರೆ ನಟ ಹಾಗೂ ಮಾಡೆಲ್ ಸಮೀರ್ ಶರ್ಮಾ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮುಂಬೈನ ಮಲಾಡ್ ಪೂರ್ವ ಭಾಗದ ಅಹಿಂಸಾ ಮಾರ್ಗದಲ್ಲಿನ ನೇಹಾ ಸಿಎಚ್ಎಸ್ ಕಟ್ಟಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಅಡುಗೆಯ ಮನೆಯ ಫ್ಯಾನ್ಗೆ ನೇಣು ಹಾಕಿಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭದ್ರತಾ ಸಿಬ್ಬಂದಿ ಇದನ್ನು ಗಮನಿಸಿ ಕುಟುಂಬಸ್ಥರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆಯೇ ಸಮೀರ್ ಶರ್ಮಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದ್ದು, ದೇಹ ಕೊಳೆತ ಸ್ಥಿತಿಗೆ ತಲುಪಿದೆ. ಮೃತದೇಹದ ಬಳಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ.
ಅಮೆರಿಕದಲ್ಲಿ ಟಿಕ್ ಟಾಕ್ ನಿಷೇಧ ಮಾಡಿದ ಟ್ರಂಪ್
ಹಿಂದಿಯ ಜನಪ್ರಿಯ ಧಾರಾವಾಹಿ ಯೇ ರಿಷ್ತೆ ಹೈ ಫ್ಯಾರ್ ಕೆ, ಕಹಾನಿಘರ ಘರಿ ಕೀ, ಕ್ಯೂಂಕಿ ಸಾಸ್ ಬಿ ಕಭಿ ಬಹು ಥೀ,ಜ್ಯೋತಿ, ಇಸ್ ಪ್ಯಾರ್ ಕೋ ಕ್ಯಾ ನಾಮ್ ದೋ ಗಳಲ್ಲಿ ನಟಿಸಿದ್ದರು. ಮಾಡೆಲ್ ಆಗಿದ್ದ ಅವರು ಹಿಂದಿ ಸೀರಿಯಲ್ಗಳಲ್ಲಿ ಸಾಕಷ್ಟು ಹೆಸರು ಗಳಿಸಿದ್ದರು. ಆದರೆ ಆತ್ಮಹತ್ಯೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ.