ಮುಂಬೈ: ದೇಗುಲದ ಮೂರ್ತಿ ಕಳವು ಪ್ರಕರಣದಲ್ಲಿ ಸಾಕ್ಷಿ ಹೇಳಲು ಖುದ್ದು ಗರ್ಭಗುಡಿಯಲ್ಲಿರುವ ಮೂರ್ತಿಯೇ ನ್ಯಾಯಾಲಯಕ್ಕೆ ಆಗಮಿಸಿದೆ.
11 ವರ್ಷಗಳ ಹಿಂದೆ ಪೃಥ್ವಿಪುರ್ ಫೋರ್ಟ್ ಬಳಿಯ ಬಂಕೇ ಬಿಹಾರಿ ದೇಗುಲದ ಮೂರ್ತಿಗಳ ಕಳವು ಪ್ರಕರಣದ ವಿಚಾರಣೆ ವೇಳೆ ಮಧ್ಯಪ್ರದೇಶದ ನಿವಾರಿ ನ್ಯಾಯಾಲಯಕ್ಕೆ ಕೃಷ್ಣ ಮತ್ತು ರಾಧೆಯ ಮೂರ್ತಿಗಳನ್ನು ಹಾಜರುಪಡಿಸಲಾಗಿತ್ತು. ಅವುಗಳನ್ನು ಗುರುತಿಸಿದ ನಂತರ ಗರ್ಭಗುಡಿಗೆ ಮರಳಿಸುವಂತೆ ನ್ಯಾಯಾಲಯ ಸೂಚಿಸಿದೆ. ಈ ಪ್ರಕರಣದ ನಾಲ್ಕು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ.