Wednesday, July 6, 2022

ವಾಹನ ಓಡಿಸುವಾಗ ಮೊಬೈಲ್ ಬಳಸಿದ್ರೆ ಹತ್ತು ಸಾವಿರ ರೂ. ದಂಡ!

Follow Us

ಉತ್ತರ ಪ್ರದೇಶ: ದೇಶದಲ್ಲಿ ದಾಖಲಾಗುವ ಅಪಘಾತಗಳ ಪೈಕಿ ಬಹುಪಾಲು ಅಪಘಾತಗಳಿಗೆ ಕಾರಣ ವಾಹನ ಚಲಾಯಿಸುವ ವೇಳೆ ಮೊಬೈಲ್ ಬಳಸೋದು. ಹೀಗಾಗಿಯೇ ಲಾಕ್ ಡೌನ್ ವೇಳೆಯೂ ಅಪಘಾತಗಳ ಸಂಖ್ಯೆ ಕಡಿಮೆಯಾಗಿಲ್ಲ. ಆದರೆ ಉತ್ತರ ಪ್ರದೇಶ ಸರ್ಕಾರ ವಾಹನ ಚಲಾಯಿಸುವ ವೇಳೆ ಮೊಬೈಲ್ ಬಳಸುವ ಪ್ರವೃತ್ತಿಗೆ ಕಡಿವಾಣ ಹಾಕಲು ಭರ್ಜರಿ ದಂಡ ವಿಧಿಸುವ ನಿರ್ಣಯಕ್ಕೆ ಬಂದಿದೆ.
ಹೌದು, ಉತ್ತರ ಪ್ರದೇಶದಲ್ಲಿ ಇನ್ಮುಂದೆ ವಾಹನ ಓಡಿಸುವಾಗ ಮೊಬೈಲ್ ಬಳಸಿದ್ರೆ ನಿಮಗೆ ಭಾರೀ ಮೊತ್ತದ ದಂಡ ಕಾದಿದೆ. ಮೊದಲ ಬಾರಿಗೆ ಈ ನಿಯಮ ಉಲ್ಲಂಘಿಸಿದರೆ 1 ಸಾವಿರ ದಂಡ ಹಾಗೂ ಮತ್ತೊಮ್ಮೆ ಗಾಡಿ ಓಡಿಸುವಾಗ ಮೊಬೈಲ್ ಬಳಸಿದರೆ ಬರೋಬ್ಬರಿ 10 ಸಾವಿರ ರೂಪಾಯಿ ದಂಡ ಹಾಗೂ ಅಂತಹ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಉತ್ತರ ಪ್ರದೇಶ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತ ಹಾಗೂ ಸಾವಿನ ಸಂಖ್ಯೆ ತಡೆಯುವ ಉದ್ದೇಶದಿಂದ ಈ ಕ್ರಮ ಅನಿವಾರ್ಯ ಅಂತಿದೆ ಉತ್ತರ ಪ್ರದೇಶದ ಆಡಳಿತ.
ಆದರೆ ಉತ್ತರ ಪ್ರದೇಶ ಸರ್ಕಾರದ ಈ ನಿರ್ಧಾರಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈಗಾಗಲೇ ಕೊರೋನಾ, ಲಾಕ್ ಡೌನ್ ಎಫೆಕ್ಟ್’ನಿಂದ ಜನರು ಕೆಲಸ ಕಳೆದುಕೊಂಡು ಪರದಾಡುತ್ತಿದ್ದಾರೆ. ಇಂಥ ವೇಳೆಯಲ್ಲಿ ಈ ದುಬಾರಿ ದಂಡ ಜನರಿಗೆ ಭಾರವಾಗಲಿದೆ ಅನ್ನೋದು ಸಾರ್ವಜನಿಕರ ಅಳಲು.

ಮತ್ತಷ್ಟು ಸುದ್ದಿಗಳು

vertical

Latest News

ರಷ್ಯಾ ಕ್ಷಿಪಣಿ ದಾಳಿಗೆ ಬ್ರೆಜಿಲ್ ಮಾಡೆಲ್ ಸಾವು

newsics.com ಮಾಸ್ಕೋ: ಉಕ್ರೇನ್  ವಿರುದ್ಧ ರಷ್ಯಾ ನಡೆಸುತ್ತಿರುವ ಹೋರಾಟದಲ್ಲಿ ಬ್ರೆಜಿಲ್ ನ ರೂಪದರ್ಶಿಯೊಬ್ಬರು ಮೃತಪಟ್ಟಿದ್ದಾರೆ. ಸಾವನ್ನಪ್ಪಿರುವ ರೂಪದರ್ಶಿಯನ್ನು  ಬ್ರೆಜಿಲ್ ನ  ಥಾಲಿತಾ ಡೂ ವಲ್ಲೆ ಎಂದು ಗುರುತಿಸಲಾಗಿದೆ. ಥಾಲಿತಾ  ಉಕ್ರೇನ್...

ಚಾಕಲೇಟ್ ಕವರ್ ನಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್: ನಾಲ್ವರ ಸೆರೆ

newsics.com ಬೆಂಗಳೂರು:  ವಿದ್ಯಾರ್ಥಿಗಳಿಗೆ ಚಾಕಲೇಟ್ ಕವರ್ ನಲ್ಲಿ ಅಡಗಿಸಿ ಡ್ರಗ್ಸ್ ಪೂರೈಸುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರಿನ  ಆವಲ ಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು  ಮೊಹಮ್ಮದ್ ಅಸ್ಲಾಂ,  ಮೊಹಮ್ಮದ್ ನದೀಂ , ಸಚ್ಚಿಂದ್ರನ್ ಮತ್ತು...

ಒಟಿಪಿ ನೀಡುವ ವಿಷಯಕ್ಕೆ ಜಗಳ: ಪ್ರಯಾಣಿಕನ ಹತ್ಯೆ ಮಾಡಿದ ಕ್ಯಾಬ್ ಚಾಲಕ

newsics.com ಚೆನ್ನೈ: ಕಾರನ್ನು ಬಾಡಿಗೆಗೆ ನಿಗದಿಪಡಿಸಿ ಪ್ರಯಾಣ ಆರಂಭಿಸುವ ಮೊದಲು ಒಟಿಪಿ ನೀಡುವ ಜಗಳ ಪ್ರಯಾಣಿಕನ ಕೊಲೆಯಲ್ಲಿ ಅಂತ್ಯವಾಗಿದೆ. ಚೆನ್ನೈ ನಗರದ ನವಲೂರಿನಲ್ಲಿ ಈ ಘಟನೆ ನಡೆದಿದೆ. ಸಾಫ್ಟವೇರ್ ಡೆವಲಪರ್ ಆಗಿರುವ...
- Advertisement -
error: Content is protected !!