newsics.com
ಶ್ರೀನಗರ: ಭಯೋತ್ಪಾದಕರು ಹಿಂದೂ ಶಿಕ್ಷಕರನ್ನು ಗುರಿಯಾಗಿರಿಸಿ ಗುಂಡಿನ ದಾಳಿ ನಡೆಸಿದ್ದಾರೆ. ಶ್ರೀನಗರದ ಈದ್ಗಾ ಸಂಗಮ್ ಎಂಬ ಪ್ರದೇಶದಲ್ಲಿ ಈ ದಾಳಿ ನಡೆಸಲಾಗಿದೆ.
ಮುಖ್ಯ ಶಿಕ್ಷಕ ಸತೀಂದರ್ ಮತ್ತು ದೀಪಕ್ ಚಾಂದ್ ಎಂಬವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಇದೀಗ ಇಬ್ಬರು ಶಿಕ್ಷಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಶ್ರೀನಗರದಲ್ಲಿ ಭಯೋತ್ಪಾದಕರು ಹಿಂದೂಗಳನ್ನು ಗುರಿಯಾಗಿರಿಸಿ ಕಳೆದ ಎರಡು ದಿನಗಳಿಂದ ದಾಳಿ ನಡೆಸುತ್ತಿದ್ದಾರೆ. ಕಾಶ್ಮೀರಿ ಪಂಡಿತ ಮತ್ತು ಬೀದಿ ಬದಿ ವ್ಯಾಪಾರಿಯೊಬ್ಬರನ್ನು ಎರಡು ದಿನಗಳ ಹಿಂದೆ ಹತ್ಯೆ ಮಾಡಲಾಗಿತ್ತು.
ಹಸಿರು ನ್ಯಾಯಮಂಡಳಿಗೆ ಸ್ವಯಂ ಪ್ರೇರಿತ ವಿಚಾರಣೆ ಹಕ್ಕಿದೆ: ಸುಪ್ರೀಂ ಕೋರ್ಟ್ ತೀರ್ಪು