newsics.com
ಶ್ರೀನಗರ: ಇತ್ತೀಚೆಗೆ ನಾಗರಿಕರ ಬರ್ಬರ ಹತ್ಯೆ ಮಾಡಿದ್ದ ಭಯೋತ್ಪಾದಕನೊಬ್ಬನನ್ನು ಭದ್ರತಾಪಡೆ ಇಂದು ಮುಂಜಾನೆ ಹೊಡೆದುರುಳಿಸಿದೆ.
ಹತನಾದ ಉಗ್ರನನ್ನು ಇಮ್ತಿಯಾಜ್ ಅಹ್ಮದ್ ಎಂದು ಗುರುತಿಸಲಾಗಿದೆ. ಲಷ್ಕರ್ ಇ ತೊಯ್ಯಬಾ ಸಂಘಟನೆಯಲ್ಲಿ ಇಮ್ತಿಯಾಜ್ ಅಹ್ಮದ್ ಗುರುತಿಸಿಕೊಂಡಿದ್ದ ಎಂದು ವರದಿಯಾಗಿದೆ.
ಬಂಡಿಪೋರಾ ಬಳಿ ಉಗ್ರರ ದಾಳಿಯಲ್ಲಿ ನಾಗರಿಕರು ಸಾವನ್ನಪ್ಪಿದ್ದರು.
ಈ ಮಧ್ಯೆ ಶ್ರೀನಗರದಲ್ಲಿ ಶಿಕ್ಷಕರನ್ನು ಹತ್ಯೆ ಮಾಡಿದ ಉಗ್ರರ ಬಂಧನಕ್ಕೆ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ