newsics.com
ಶ್ರೀನಗರ: ಶಾಲೆಗೆ ದಾಳಿ ನಡೆಸಿದ ಉಗ್ರರು ಎಲ್ಲ ಶಿಕ್ಷಕರ ಗುರುತು ಕಾರ್ಡ್ ಪರಿಶೀಲಿಸಿದ್ದಾರೆ. ಈ ರೀತಿ ಪರಿಶೀಲಿಸಿದ ಬಳಿಕ ಉಳಿದ ಶಿಕ್ಷಕರನ್ನು ಬಿಟ್ಟು ಬಿಟ್ಟಿದ್ದಾರೆ. ಶಿಕ್ಷಕರಾದ ಸತೀಂದರ್ ಕೌರ್ ಮತ್ತು ದೀಪಕ್ ಚಾಂದ್ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ರೀತಿ ಬೆಳವಣಿಗೆ ಯಾಗಿರುವುದನ್ನು ಪೊಲೀಸರು ದೃಢೀಕರಿಸಿಲ್ಲ, ಘಟನೆ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ವಿಜಯ ಕುಮಾರ್, ಸಾಮಾಜಿಕ ಸಾಮರಸ್ಯ ಕದಡಲು ಉಗ್ರರು ಈ ಸಂಚು ಹೂಡಿದ್ದಾರೆ ಎಂದು ಆರೋಪಿಸಿದ್ದಾರೆ.
ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.