newsics.com
ಶ್ರೀನಗರ: ಭಯೋತ್ಪಾದಕರು ಶ್ರೀನಗರದಲ್ಲಿ ಅಟ್ಟಹಾಸ ಮೆರೆದಿದ್ದಾರೆ. ಶ್ರೀನಗರದಲ್ಲಿ ಕಾಶ್ಮೀರಿ ಪಂಡಿತ ಮತ್ತು ಹೊರ ರಾಜ್ಯದಿಂದ ಬಂದು ಅಲ್ಲಿ ಬೇಲ್ ಪುರಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಶ್ರೀನಗರ ಇಕ್ಬಾಲ್ ಪಾರ್ಕ್ ನಲ್ಲಿ ವ್ಯಾಪಾರಿ ಹಾಗೂ ಕಾಶ್ಮೀರಿ ಪಂಡಿತರಾಗಿರುವ ಮಕನ್ ಲಾಲ್ ಬಿಂದ್ರೂ ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಶ್ರೀನಗರದ ಲಾಲ್ ಬಜಾರ್ ಪ್ರದೇಶದಲ್ಲಿ ಹೊರ ರಾಜ್ಯದಿಂದ ಜೀವನ ನಿರ್ವಹಣೆಗಾಗಿ ರಸ್ತೆಯಲ್ಲಿ ಬೇಲ್ ಪುರಿ ಮಾರಾಟ ಮಾಡುತ್ತಿದ್ದ ಬಡಪಾಯಿಯನ್ನು ಉಗ್ರರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.
ಅಪ್ಘಾನಿಸ್ತಾನದ ಬೆಳವಣಿಗೆ ಬಳಿಕ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನಾ ಕೃತ್ಯ ಹೆಚ್ಚಾಗಲಿದೆ ಎಂಬ ಭೀತಿ ಇದೀಗ ನಿಜವಾಗುತ್ತಿದೆ.