newsics.com
ಶ್ರೀನಗರ: ಈ ಹಿಂದೆ ಭದ್ರತಾಪಡೆಗಳ ಜತೆ ನೇರ ಸಂಘರ್ಷಕ್ಕೆ ಮುಂದಾಗುತ್ತಿದ್ದ ಉಗ್ರರು ಇದೀಗ ಕಾಶ್ಮೀರದಲ್ಲಿರುವ ಅಲ್ಪ ಸಂಖ್ಯಾತ ಹಿಂದೂಗಳನ್ನು ಟಾರ್ಗೆಟ್ ಮಾಡಲು ಆರಂಭಿಸಿದ್ದಾರೆ.
ಶಿಕ್ಷಕರಾದ ಸತೀಂದರ್ ಕೌರ್ ಮತ್ತು ದೀಪಕ್ ಚಾಂದ್ ಇದೀಗ ಉಗ್ರರ ಗುಂಡಿನ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇಬ್ಬರು ಶಿಕ್ಷಕರು ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಹಿಂದೂ ಮತ್ತು ಸಿಖ್ ರಲ್ಲಿ ಅಭದ್ರತೆ ಭಾವನೆ ಮೂಡಿಸಲು ಉಗ್ರರು ಈ ಸಂಚು ಹೂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಪಾಕಿಸ್ತಾನದ ಐಎಸ್ಐ ಸೂಚನೆ ಮೇರೆಗೆ ಉಗ್ರರು ಇದೀಗ ತಮ್ಮ ಕಾರ್ಯತಂತ್ರ ಬದಲಾಯಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.