Thursday, December 1, 2022

ಅತಿ ಗಣ್ಯರ ಪ್ರಯಾಣಕ್ಕೆ ಬಂತು ಬಿ 777 ವಿಮಾನ

Follow Us

newsics.com
ನವದೆಹಲಿ: ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಿಯಂತಹ ಗಣ್ಯವ್ಯಕ್ತಿಗಳು ಪ್ರಯಾಣಿಸುವ ವಿಶೇಷ ಬಿ 777 ವಿಮಾನವೊಂದು ಅಮೆರಿಕದಿಂದ ಗುರುವಾರ ದೆಹಲಿಗೆ ಆಗಮಿಸಿದೆ.
ಇಂಥದ್ದೇ ಇನ್ನೂ ಒಂದು ವಿಮಾನ ಭಾರತಕ್ಕೆ ಬರಲಿದೆ. ಏರ್‌ ಇಂಡಿಯಾ ಒನ್ ವಿಮಾನ ಗುರುವಾರ ಮಧ್ಯಾಹ್ನ 3 ಗಂಟೆಗೆ ಅಮೆರಿಕದ ಟೆಕ್ಸಾಸ್‌ನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ವಿಮಾನ ತಯಾರಕ ಕಂಪನಿ ಬೋಯಿಂಗ್‌ ಕಂಪನಿ ಈ ವಿಮಾನಗಳನ್ನು ಜುಲೈನಲ್ಲಿ ಏರ್ ಇಂಡಿಯಾ ಸಂಸ್ಥೆಗೆ ಹಸ್ತಾಂತರಿಸಬೇಕಿತ್ತು. ಕೊರೋನಾ ಲಾಕ್‌ಡೌನ್‌ ಕಾರಣದಿಂದಾಗಿ ವಿತರಣೆ ಎರಡು ಬಾರಿ ವಿಳಂಬವಾಗಿದೆ. ಈ ಎರಡೂ ವಿಮಾನಗಳು ವಿವಿಐಪಿಗಳು ಸಂಚರಿಸುವ ಸುಸಜ್ಜಿತ ವಿಮಾನಗಳನ್ನಾಗಿಸಿ ಮಾರ್ಪಡಿಸುವ ಮುನ್ನ 2018ರಲ್ಲಿ ಏರ್ ಇಂಡಿಯಾದ ವಾಣಿಜ್ಯ ವಿಭಾಗದಲ್ಲಿದ್ದವು. ಈ ಎರಡು ವಿಮಾನಗಳ ಬೆಲೆ 8600 ಕೋಟಿ ರೂ.ಗಳಾಗಿದೆ.

ಶಾಲಾ ಕಾಲೇಜು ಆರಂಭಕ್ಕೆ ಸರ್ಕಾರದಿಂದ ಶೀಘ್ರ ಸ್ಪಷ್ಟ ಮಾಹಿತಿ- ಡಿಸಿಎಂ

ಹತ್ರಾಸ್ ಕೇಸ್ ಬೆನ್ನಲ್ಲೇ ಯುಪಿಯಲ್ಲಿ ಮತ್ತೊಂದು ರೇಪ್ ಅಂಡ್ ಮರ್ಡರ್

ತಳ್ಳಾಟದಲ್ಲಿ ಮುಗ್ಗರಿಸಿಬಿದ್ದ ರಾಹುಲ್

ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ: ಭಾರತದ ಇಬ್ಬರು ಯೋಧರ ವೀರಮರಣ

ಮತ್ತಷ್ಟು ಸುದ್ದಿಗಳು

vertical

Latest News

ಅಂದು ಟಿ ವಿ ನಿರೂಪಕಿ ಇಂದು ಮಧ್ಯವರ್ತಿ: ಬಂಧಿತ ಪಿಂಕಿ ಇರಾನಿ ನಿಗೂಢ ಹೆಜ್ಜೆ

newsics.com ನವದೆಹಲಿ: ವಂಚಕ ಸುಕೇಶ್ ಚಂದ್ರ ಶೇಖರ್ ಗೆ ಸೆಲೆಬ್ರಿಟಿಗಳನ್ನು ಪರಿಚಯ ಮಾಡಿಸಿದ್ದ ಮಧ್ಯವರ್ತಿ ಪಿಂಕಿ ಇರಾನಿ ವೃತ್ತಿ ಜೀವನ ಆರಂಭಿಸಿದ್ದು ಟಿ ವಿ ನಿರೂಪಕಿಯಾಗಿ. ಮುಂಬೈನ ಚಾನೆಲ್...

ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ : ಸಿಎಂ ಬೊಮ್ಮಾಯಿ ಸ್ಪಷ್ಟನೆ

newsics.com ಬೆಂಗಳೂರು: ಬಿಜೆಪಿ ತತ್ವಗಳಲ್ಲಿ ನಂಬಿಕೆ ಇಟ್ಟಿರುವ ಪಕ್ಷವಾಗಿದ್ದು, ರೌಡಿಗಳಿಗೆ , ಪಾತಕಿಗಳಿಗೆ ಅವಕಾಶ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ ಕುಖ್ಯಾತ ಪಾತಕಿ ಸೈಲೆಂಟ್...

ಕೊರಿಯಾದ ಮಹಿಳಾ ಯು ಟ್ಯೂಬರ್ ಗೆ ಕಿರುಕುಳ: ಇಬ್ಬರು ಆರೋಪಿಗಳ ಬಂಧನ

newsics.com ಮುಂಬೈ: ಮಹಾ ನಗರ ಮುಂಬೈನ ಖಾರ್ ಪ್ರದೇಶದಲ್ಲಿ ಸಾವಿರಾರು ಜನರ ಮುಂದೆ ಕೊರಿಯಾದ ಯೂ ಟ್ಯೂಬರ್ ಗೆ ಕಿರುಕುಳ ನೀಡಿದ  ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು  ಮೊಹಮ್ಮದ್ ಶೇಕ್ ಮತ್ತು  ಮೊಹಮ್ಮದ್...
- Advertisement -
error: Content is protected !!