ಕಣ್ಣೂರು: ತನ್ನ ಹಳೆಯ ಸಾಲಗಳನ್ನು ತೀರಿಸುವುದಕ್ಕಾಗಿ ಸಾಲ ಕೇಳಲು ಬ್ಯಾಂಕ್ ಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರಿಗೆ 12 ಕೋಟಿ ರೂ. ಲಾಟರಿ ಬಹುಮಾನ ಸಿಕ್ಕಿದೆ.
ರಬ್ಬರ್ ಟ್ಯಾಪಿಂಗ್ ವೃತ್ತಿಯ ಕೇರಳ ಕಣ್ಣೂರಿನ ರಾಜನ್ ಈಗ ಕೋಟ್ಯಧಿಪತಿ.
12 ಕೋಟಿ ರೂ. ಗೆದ್ದ ಸಂತಸದಲ್ಲಿರುವ ರಾಜನ್ ಅವರು ಸಾಲಗಳನ್ನು ತೀರಿಸಬಹುದು ಎಂದು ನಿಟ್ಟುಸಿರುಬಿಟ್ಟಿದ್ದು, ತನ್ನ ಪುತ್ರಿಗೆ ಶಿಕ್ಷಣ ಕೊಡಿಸುವ ಕನಸಿದೆ ಎಂದಿದ್ದಾರೆ.
ನಿಯಮಗಳ ಪ್ರಕಾರ, ರಾಜನ್ ತೆರಿಗೆ ಮತ್ತು ಏಜೆನ್ಸಿ ಕಮಿಷನ್ ಕಡಿತಗೊಂಡ ನಂತರ 7.2 ಕೋಟಿ ರೂ. ಸಿಗಲಿದೆ.
ಸಾಲ ಕೇಳಲೆಂದು ಬ್ಯಾಂಕ್ ಗೆ ಹೋಗುತ್ತಿದ್ದವ ಈಗ ಕೋಟ್ಯಧಿಪತಿ!
Follow Us