Saturday, November 28, 2020

ಸೆಣಬಿನ ಚೀಲಗಳಲ್ಲೇ ಆಹಾರ ಧಾನ್ಯ ತುಂಬಲು ಕೇಂದ್ರ ಆದೇಶ

newsics.com
ನವದೆಹಲಿ: ಇನ್ಮುಂದೆ ಆಹಾರ ಧಾನ್ಯಗಳನ್ನು ಸೆಣಬಿನ ಚೀಲಗಳಲ್ಲಿ ತುಂಬಿಸುವುದು ಕಡ್ಡಾಯಗೊಳಿಸಿ ಇಂದು(ಅ.29) ಕೇಂದ್ರ ಸಚಿವ ಸಂಪುಟ ಸಭೆ ನಿರ್ಧಾರ ಕೈಗೊಂಡಿದೆ.
ಸೆಣಬಿನ ಚೀಲಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದ್ದು, ಶೇ.100 ರಷ್ಟು ಆಹಾರ ಧಾನ್ಯಗಳನ್ನು ಸೆಣಬಿನ ಚೀಲಗಳಲ್ಲಿ ಮತ್ತು ಶೇ.20 ರಷ್ಟು ಸಕ್ಕರೆಯನ್ನು ಸೆಣಬಿನ ಚೀಲಗಳಲ್ಲಿ ತುಂಬಿಸಬೇಕಾಗಿದೆ. ಸೆಣಬಿನ ಚೀಲಗಳ ಬೆಲೆಯನ್ನು ಸಮಿತಿ ನಿರ್ಧರಿಸಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಎಥೆನಾಲ್ ದರವನ್ನು ಹೆಚ್ಚಿಸಲು ನಿರ್ಧರಿಸಿದ್ದು, 2021ರಲ್ಲಿ ಹೊಸ ದರ ಜಾರಿಗೆ ಬರಲಿದೆ. ಪ್ರತಿ ಲೀಟರ್‌ ಎಥೆನಾಲ್ ಬೆಲೆ 62.65 ರೂಪಾಯಿಯಾಗಲಿದೆ ಎಂದು ಜಾವಡೇಕರ್ ಹೇಳಿದರು.
ಅಣೆಕಟ್ಟುಗಳ ಸುರಕ್ಷತೆ ಮತ್ತು ನಿರ್ವಹಣೆಗಾಗಿ ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದು, ಸಾಕಷ್ಟು ಹಳೆಯದಾದ ಅಣೆಕಟ್ಟುಗಳ ಸ್ಥಿತಿಯನ್ನು ಸುಧಾರಿಸಲಾಗುವುದು. ಈ ಯೋಜನೆಯಲ್ಲಿ ಕರ್ನಾಟಕ ಸೇರಿ 19 ರಾಜ್ಯಗಳನ್ನು ಸೇರಿಸಲಾಗಿದೆ. ಆರಂಭದಲ್ಲಿ ಒಟ್ಟು 736 ಅಣೆಕಟ್ಟುಗಳನ್ನು ಯೋಜನೆಗೆ ಸೇರಿಸಲಾಗಿದೆ. 19 ರಾಜ್ಯಗಳಲ್ಲಿರುವ 736 ಡ್ಯಾಮ್ ಗಳ ನಿರ್ವಹಣೆಗಾಗಿ ಯೋಜನೆಯನ್ನು ರೂಪಿಸಲಾಗಿದೆ. ಮುಂದಿನ 10 ವರ್ಷಗಳ ಕಾಲ ಡ್ಯಾಂಗಳನ್ನು ನಿರ್ವಹಣೆ ಮಾಡಲು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಜಾವಡೇಕರ್ ಮಾಹಿತಿ ನೀಡಿದರು.

ಭಾರತಕ್ಕೆ ಅಧಿಕೃತವಾಗಿ ವಿದಾಯ ಹೇಳಿದ ಮುಂಗಾರು ಮಾರುತ

ಒಂದೇ ದಿನ 49,881 ಮಂದಿಗೆ ಕೊರೋನಾ ಸೋಂಕು,517 ಬಲಿ

ನೀರಿನಲ್ಲಿ ಕೊಚ್ಚಿ ಹೋದ ಆರು ಬಾಲಕರು, ಮೂರು ಶವಪತ್ತೆ

ವೈದ್ಯರ ಅಪಹರಿಸಿ 10 ಕೋಟಿ ರೂಪಾಯಿಗೆ ಬೇಡಿಕೆ: ಏಳು ಆರೋಪಿಗಳ ಬಂಧನ

ತಮಿಳುನಾಡಿನಲ್ಲಿ ಹಿಂಗಾರು ಮಳೆ ಅಬ್ಬರ: ಚೆನ್ನೈನಲ್ಲಿ ಪ್ರವಾಹ

ಮತ್ತಷ್ಟು ಸುದ್ದಿಗಳು

Latest News

ಸಿಎಂ ಬಿಎಸ್ವೈ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ, ಆಸ್ಪತ್ರೆಗೆ ದಾಖಲು

newsics.com ಬೆಂಗಳೂರು: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಶುಕ್ರವಾರ ರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಸಂತೋಷ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಬೆಂಗಳೂರಿನ ಎಮ್.ಎಸ್....

ಇರಾನ್‌ನ ಹಿರಿಯ ಪರಿಮಾಣು ವಿಜ್ಞಾನಿ ಮುಹ್ಸಿನ್ ಹತ್ಯೆ

newsics.com ಟೆಹ್ರಾನ್: ಇರಾನ್‌ನ ಹಿರಿಯ ಪರಿಮಾಣು ವಿಜ್ಞಾನಿ ಮುಹ್ಸಿನ್ ಫಖ್ರಿಝಾದೆಹ್ ಅವರನ್ನು ಶುಕ್ರವಾರ ಹತ್ಯೆಗೈಯಲಾಗಿದೆ ಎಂದು ಇಸ್ರೇಲ್‌ನ ರಕ್ಷಣಾ ಸಚಿವಾಲಯ ತಿಳಿಸಿದೆ.ಟೆಹ್ರಾನ್‌ನ ಸಮೀಪ ಈ ಹತ್ಯೆ ನಡೆದಿದೆ ಎಂದು ಇಸ್ರೇಲ್‌ನ...

ಮುಂಬೈನಲ್ಲಿ ದಾರಿ ತಪ್ಪಿದ್ದ ಸಚಿನ್ ತೆಂಡೂಲ್ಕರ್!

newsics.com ಬೆಂಗಳೂರು: ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಇತ್ತೀಚೆಗೆ ಮುಂಬೈನಲ್ಲಿ ದಾರಿ ತಪ್ಪಿದ್ದರಂತೆ. ಆಗ ಆಟೋವಾಲಾ ಒಬ್ಬರು ನೆರವಿಗೆ ಬಂದಿದ್ದರಿಂದ ಮನೆ ತಲುಪಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ.ಈ ವರ್ಷದ ಜನವರಿಯಲ್ಲಿ...
- Advertisement -
error: Content is protected !!