ಮೊಹಾಲಿ (ಪಂಜಾಬ್): ನಿವೃತ್ತ ಸೇನಾಧಿಕಾರಿ ಪತ್ನಿಯ ಶವವನ್ನು ಇಲಿಗಳು ತಿಂದ ಘಟನೆ ಮೊಹಾಲಿಯ ದೆರೇಬಸ್ಸಿಯ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಡೆದಿದೆ.
ಸೇನೆಯ ನಿವೃತ್ತ ಕರ್ನಲ್ ಅಮರ್ಜೀತ್ ಸಿಂಗ್ ಅವರ ಪತ್ನಿ ಜಸ್ಜೋತ್ ಕೌರ್ (52) ಅವರ ಗುರುವಾರ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ನಿವೃತ್ತ ಸೇನಾ ಕರ್ನಲ್ರ ಮೃತ ಪತ್ನಿಯ ಮುಖ ಹಾಗೂ ಕಿವಿಗಳನ್ನು ಇಲಿಗಳು ತಿಂದಿವೆ.
ಆಸ್ಪತ್ರೆಯ ನಿರ್ಲಕ್ಷ್ಯ ವಿರೋಧಿಸಿ ಮೃತ ಮಹಿಳೆಯ ಸಂಬಂಧಿಕರು ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆಸಿದರು. ಆಸ್ಪತ್ರೆಯ ನಿರ್ಲಕ್ಷದ ಬಗ್ಗೆ ತನಿಖೆ ನಡೆಸುವುದಾಗಿ ಪೊಲೀಸರು ಹಾಗೂ ತಹಸೀಲ್ದಾರರು ಭರವಸೆ ನೀಡಿದ ಬಳಿಕ ಪ್ರತಿಭಟನೆ ನಿಲ್ಲಿಸಿದರು. ನಂತರ ಸ್ಥಳೀಯ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ದೇರಾಬಸ್ಸಿ ಸಿವಿಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ನಿವೃತ್ತ ಸೇನಾಧಿಕಾರಿ ಪತ್ನಿಯ ಶವ ತಿಂದ ಇಲಿಗಳು!
Follow Us