newsics.com
ನವದೆಹಲಿ: ಕೊರೋನಾ ಕಾಲದಲ್ಲಿ ದೇಶಾದ್ಯಂತ ಕಾಂಡೋಮ್, ಮಾದಕ ವಸ್ತು ಸೇವನೆಗೆ ಬಳಸುವ ರೋಲಿಂಗ್ ಪೇಪರ್, ಚಿಕನ್ ಬಿರಿಯಾನಿಗೆ ಬೇಡಿಕೆ ಹೆಚ್ಚಿದೆ.
ರಾತ್ರಿಗಿಂತ ಹಗಲಿನಲ್ಲೇ ಹೆಚ್ಚು ಜನ ಕಾಂಡೋಮ್ ಖರೀದಿಸಿರುವುದು ಅಚ್ಚರಿಯುಂಟುಮಾಡಿದೆ. ಬೆಂಗಳೂರಲ್ಲಿ ಗರ್ಭ ನಿರೋಧಕ ಮಾತ್ರೆ, ಚಿಕನ್ ಬಿರಿಯಾನಿ, ಮುಂಬೈನಲ್ಲಿ ದಾಲ್ ಖಿಚ್ಡಿ, ಚೆನ್ನೈನಲ್ಲಿ ಇಡ್ಲಿ, ದೆಹಲಿಯಲ್ಲಿ ಕಾಫಿ, ಪುಣೆಯಲ್ಲಿ ಮ್ಯಾಗಿ, ಗುರುಗ್ರಾಮದಲ್ಲಿ ಆಲೂ ಟಿಕ್ಕಿ ಬರ್ಗರ್ ಹೆಚ್ಚು ಖರೀದಿಯಾಗಿದೆ.
ಕಾಂಡೋಮ್’ಗೆ ದೇಶದೆಲ್ಲೆಡೆ ಹೆಚ್ಚು ಬೇಡಿಕೆ ಉಂಟಾಗಿದ್ದು, ಸರಾಸರಿ 3 ಪಟ್ಟು ಕಾಂಡೋಮ್ ಹೆಚ್ಚು ಮಾರಾಟವಾಗಿದೆ. ಹೈದರಾಬಾದ್ನಲ್ಲಿ ಕಾಂಡೋಮ್ ಖರೀದಿಸುವವರ ಪ್ರಮಾಣ 6 ಪಟ್ಟು ಅಧಿಕವಾಗಿದೆ. ಚೆನ್ನೈ 5, ಜೈಪುರ 4, ಮುಂಬೈ ಮತ್ತು ಬೆಂಗಳೂರು ತಲಾ 3 ಪಟ್ಟು ಏರಿಕೆ ದಾಖಲಿಸಿವೆ. ಬೆಂಗಳೂರಿನ ಜನರು 22 ಪಟ್ಟು ಹೆಚ್ಚು ರೋಲಿಂಗ್ ಪೇಪರ್ಗಳನ್ನು ಖರೀದಿಸಿದ್ದಾರೆ. ತುರ್ತು ಗರ್ಭನಿರೋಧಕ ಮಾತ್ರಗಳ ಖರೀದಿಯಲ್ಲಿ ಬೆಂಗಳೂರು, ಪುಣೆ, ಗುರುಗ್ರಾಮ, ಹೈದರಾಬಾದ್ ಮತ್ತು ದೆಹಲಿ ಅಗ್ರಸ್ಥಾನದಲ್ಲಿವೆ. ಜೈಪುರದಲ್ಲಿ ಗರ್ಭಧಾರಣೆಯ ಪರೀಕ್ಷಾ ಕಿಟ್ಗಳ ಖರೀದಿ ಪ್ರಮಾಣ ಹೆಚ್ಚಿದೆ.
ಕನ್ಸೈರ್ಜ್ ಸರ್ವೀಸಸ್ ಅಪ್ಲಿಕೇಶನ್ ಡಂಜೊ ನಡೆಸಿದ ಅಧ್ಯಯನದಲ್ಲಿ ಈ ಅಂಶಗಳು ಬಯಲಾಗಿವೆ.
ಬೆಂಗಳೂರಿನಲ್ಲಿ ಚಿಕನ್ ಬಿರಿಯಾನಿ ಅತಿ ಹೆಚ್ಚು ಆರ್ಡರ್ ಪಡೆದುಕೊಂಡಿದ್ದರೆ, ಮುಂಬೈನವರು ದಾಲ್ ಖಿಚ್ಡಿ, ಚೆನ್ನೈನವರು ಇಡ್ಲಿ ಹಾಗೂ ಗುರುಗ್ರಾಮದವರು ಆಲೂ ಟಿಕ್ಕಿ ಬರ್ಗರ್ ಅನ್ನು ಹೆಚ್ಚು ಖರೀದಿಸಿದ್ದಾರೆ. ಪುಣೆಯ ಜನರು ಹೆಚ್ಚು ಮ್ಯಾಗಿಗೆ ಮುಗಿಬಿದ್ದಿದ್ದು, ದೆಹಲಿ, ಚೆನ್ನೈ ಮತ್ತು ಜೈಪುರದವರು ಕಾಫಿಯನ್ನು ಹೆಚ್ಚು ಆರ್ಡರ್ ಮಾಡಿದ್ದಾರೆ. ಪುಣೆ ಮತ್ತು ಹೈದರಾಬಾದ್ನಲ್ಲಿ ಹಾಲು ಖರೀದಿ ಹೆಚ್ಚಳವಾಗಿದೆ. ದೆಹಲಿ ಜನರು ತಂಪು ಪಾನೀಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದ್ದಾರೆ. ಹೈದರಾಬಾದ್, ಚೆನ್ನೈ, ಬೆಂಗಳೂರು ಮತ್ತು ಮುಂಬೈನಲ್ಲಿ ಸಕ್ಕರೆಯ ಬದಲು ಬೆಲ್ಲವನ್ನು ಹೆಚ್ಚು ಬಳಸಲಾಗಿದೆ ಎಂದು ಅಧ್ಯಯನ ವಿವರಿಸಿದೆ.
ಆಹಾರ ಕೊಡಲಾರದ ದುಸ್ಥಿತಿ; 8 ವರ್ಷದ ಮಗಳಿಗೆ ವಿಷವುಣಿಸಿದ ವೈದ್ಯೆ!
ಕೇಂದ್ರ ವಿವಿ ಪದವಿ ತರಗತಿ ಪ್ರವೇಶಕ್ಕೆ ಬೌದ್ಧಿಕ ಸಾಮರ್ಥ್ಯ ಪರೀಕ್ಷೆ