Saturday, April 17, 2021

ಮಾರುಕಟ್ಟೆಗೆ ಬಂತು ವಜ್ರದ ಮಾಸ್ಕ್..!

ಸೂರತ್: ಕೊರೋನಾ ಈಗ ನಮ್ಮ ಬದುಕಿನ ಭಾಗವಾಗಿದೆ. ಕೊರೋನಾ ಸೋಂಕಿನ ಮುನ್ನೆಚ್ಚರಿಕೆಯೊಂದಿಗೆ ಬದುಕಬೇಕಾಗಿರೋದರಿಂದ ಮಾಸ್ಕ್ ಅಗತ್ಯ ಮತ್ತು ಅನಿವಾರ್ಯ. ಹೀಗಾಗಿ ಚಿನ್ನದ ಮಾಸ್ಕ್ ಮಾರುಕಟ್ಟೆಗೆ ಬಂದಿತ್ತು. ಇದೀಗ ಚಿನ್ನದ ಬದಲು ವಜ್ರದ ಮಾಸ್ಕ್ ಮಾರುಕಟ್ಟೆಗೆ ಬಂದಿದ್ದು ಶ್ರೀಮಂತರು ಮುಗಿಬಿದ್ದಿದ್ದಾರೆ.
ಸೂರತ್’ನ ಚಿನ್ನದ ಮಳಿಗೆಯಲ್ಲಿ ಇಂತಹದೊಂದು ವಜ್ರದ ಮಾಸ್ಕ್ ಮಾರಾಟ ಆರಂಭವಾಗಿದ್ದು 1 ರಿಂದ 4 ಲಕ್ಷ ರೂಪಾಯಿಗೆ ವಜ್ರಖಚಿತ ಮಾಸ್ಕ್ ಮಾರಾಟವಾಗುತ್ತಿದೆ. ಅಮೇರಿಕನ್ ಡೈಮಂಡ್ ಸೇರಿದಂತೆ ವಿವಿಧ ಗಾತ್ರದ ವಜ್ರದ ಹರಳುಗಳುಳ್ಳ ಮಾಸ್ಕ್’ಗಳು ಮಾರುಕಟ್ಟೆಯಲ್ಲಿದ್ದು ಜನರು ಖರೀದಿಯಲ್ಲಿ ತೊಡಗಿದ್ದಾರೆ.
ಈ‌ ಬಗ್ಗೆ ವಿವರಣೆ ನೀಡಿರುವ ಸೂರತ್’ನ ಹರಳುಗಳ ವ್ಯಾಪಾರಿ ದೀಪಕ್ ಚೌಕ್ಸಿ, ಲಾಕ್ ಡೌನ್ ತೆರವಾಗುತ್ತಿದ್ದಂತೆ ಮದುವೆಗಳಿಗೆ ತೆರಳುವ ಜನರು ವಧು-ವರರಿಗೆ ಗಿಫ್ಟ್ ನೀಡಲು ವಿವಿಧ ಬಗೆಯ ಮಾಸ್ಕ್’ಗಳನ್ನು ಕೇಳಲಾರಂಭಿಸಿದರು. ಆಗ ನಾವು ಇಂತಹದೊಂದು ಸಾಹಸಕ್ಕೆ ಅಡಿ ಇಟ್ಟು ನಮ್ಮ ವಿನ್ಯಾಸಕಾರರ ಸಹಾಯದಿಂದ ಬೇರೆ ಬೇರೆ ಬೆಲೆಯಲ್ಲಿ ಮಾಸ್ಕ್ ಸಿದ್ಧಪಡಿಸಿ‌ ಮಾರುತ್ತಿದ್ದೇವೆ ಎಂದಿದ್ದಾರೆ.
ಜನ‌ ಮರುಳೋ ಜಾತ್ರೆ ಮರುಳೋ ಎಂಬಂತೆ ಜನ ಆರೋಗ್ಯ ಕಾಪಾಡಿಕೊಳ್ಳೋ ವಸ್ತುವಿನಲ್ಲೂ ಅಂತಸ್ತು, ಸೌಂದರ್ಯ ಹಾಗೂ ಹಣ ಹೂಡಿಕೆ ಮಾಡ್ತಿರೋದಂತೂ ಸತ್ಯ.

ಮತ್ತಷ್ಟು ಸುದ್ದಿಗಳು

Latest News

ಕುಂಭಮೇಳದ ಪ್ರಧಾನ ಸಾಧು ಕೊರೋನಾಗೆ ಬಲಿ

newsics.com ಹರಿದ್ವಾರ: ಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಪ್ರಧಾನ ಸಾಧು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. 65 ವರ್ಷದ ಸಾಧು ಈ ವಾರದ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಕೊರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಕುಂಭಮೇಳಕ್ಕೆ ಮಧ್ಯಪ್ರದೇಶದಿಂದ...

ಬೆಂಗಳೂರು ವಿವಿ ಪರೀಕ್ಷೆಗಳು‌ ಮುಂದೂಡಿಕೆ

newsics.com ಬೆಂಗಳೂರು: ಕೊರೋನಾ ಅಬ್ಬರ ಹಾಗೂ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಶೀಘ್ರದಲ್ಲೇ ಮುಂದಿನ ದಿನಾಂಕಗಳನ್ನು ಪ್ರಕಟಿಸುವುದಾಗಿ ತಿಳಿಸಿದೆ. ಏ.19, 20, 21ರಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ...

ಪಂಜಾಬ್ ವಿರುದ್ಧ ಚೆನ್ನೈಗೆ ಸುಲಭದ ಗೆಲುವು

newsics.com ಮುಂಬೈ: ಐಪಿಎಲ್ 2021ರ ಆವೃತ್ತಿಯ 8ನೇ ಪಂದ್ಯದಲ್ಲಿ ಚೆನ್ನೈ ಬೌಲರ್ಗಳ ದಾಳಿಗೆ ನಲುಗಿದ ಪಂಜಾಬ್ ಕಿಂಗ್ಸ್ ಹೀನಾಯ ಸೋಲು ಅನುಭವಿಸಿತು. ಪಂದ್ಯದಲ್ಲಿ ಚೆನ್ನೈ ತಂಡ 6 ವಿಕೆಟ್ ಗೆಲುವು ಗಳಿಸಿದೆ. 106 ರನ್ಗಳ...
- Advertisement -
error: Content is protected !!