newsics.com
ಪಟ್ನಾ: ಬಹುತೇಕರು ಹುಡುಗಿಯರನ್ನು ನೋಡಿ ಖುಷಿಪಡುತ್ತಾರೆ. ಕೆಲವರು ಇನ್ನೂ ಇಲೊಂದು ಹೆಜ್ಜೆ ಮುಂದೆ ಹುಡುಗಿಯರನ್ನು ಚುಡಾಯಿಸುತ್ತಾರೆ. ಆದರೆ, ಇಲ್ಲೊಬ್ಬ ವಿದ್ಯಾರ್ಥಿ ಹುಡುಗಿಯರನ್ನು ನೋಡಿ ಮೂರ್ಛೆ ಹೋಗಿದ್ದಾನೆ. ಪರೀಕ್ಷೆ ಬರೆಯಲಾರದೆ ಆಸ್ಪತ್ರೆ ಸೇರಿದ್ದಾನೆ.
ಸಂಪೂರ್ಣ ವಿದ್ಯಾರ್ಥಿನಿಯರಿದ್ದ ಬಿಹಾರದ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಹೋದ ಏಕೈಕ ವಿದ್ಯಾರ್ಥಿ ಪ್ರಜ್ಞೆ ತಪ್ಪಿ ಬಿದ್ದು ಆಸ್ಪತ್ರೆ ಸೇರಿದ್ದಾನೆ
. ಬಿಹಾರದ ಶಾಲಾ ಪರೀಕ್ಷಾ ಮಂಡಳಿಯ 12 ನೇ ತರಗತಿ ಪರೀಕ್ಷೆಗಳು ಫೆ 1ರಿಂದ ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ನಳಂದ ಜಿಲ್ಲೆಯ ‘ಬಿಹಾರ್ ಶಾರೀಫ್’ನ ಅಲ್ಮಾ ಕಾಲೇಜಿನಲ್ಲಿ 12ನೇ ತರಗತಿ ವಿದ್ಯಾರ್ಥಿ ಮಣಿಶಂಕರ್ ಪಕ್ಕದ ಬ್ರಿಲಿಯಂಟ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ತೆರಳಿದ್ದ.
ಮಣಿಶಂಕರ್ ಪರೀಕ್ಷೆ ಬರೆಯಲು ತೆರಳಿದ್ದ ಬಿಹಾರದ ನಳಂದ ಜಿಲ್ಲೆಯ ಶಾರೀಫ್’ ಪಟ್ಟಣದ ಪರೀಕ್ಷಾ ಕೊಠಡಿಯಲ್ಲಿ ಬರೀ ವಿದ್ಯಾರ್ಥಿನಿಯರೇ ಇದ್ದರು. ಇದನ್ನು ಕಂಡು ಕೆಲಹೊತ್ತಿನ ನಂತರ ಮಣಿಶಂಕರ್ ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಿದ್ದಾನೆ. ಶಿಕ್ಷಕರಿಂದ ವಿಷಯ ತಿಳಿದ ಮಣಿಶಂಕರ್ ದೊಡ್ಡಮ್ಮ ಆತನನ್ನು ಸಮೀಪದ ಸರ್ಧಾರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
‘ಕೊಠಡಿ ತುಂಬ ವಿದ್ಯಾರ್ಥಿನಿಯರೇ ಇದ್ದಿದ್ದಕ್ಕೆ ನಮ್ಮ ಹುಡುಗ ನಿತ್ರಾಣನಾಗಿದ್ದ. ಬಳಿಕ ಮೂರ್ಛೆ ತಪ್ಪಿ ಬಿದ್ದಿದ್ದರಿಂದ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಹೋಗಿದ್ದೇವೆ’ ಎಂದು ಮಣಿಶಂಕರ್ ದೊಡ್ಡಮ್ಮ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಅಂದಹಾಗೆ, ವಿದ್ಯಾರ್ಥಿನಿಯರೇ ಇರುವ ಪರೀಕ್ಷಾ ಕೊಠಡಿಗೆ ಈ ಮಣಿಶಂಕರ್ ಒಬ್ಬನೇ ಇರುವಂತಾಗಲು ಆತನೇ ಕಾರಣ. ಪರೀಕ್ಷಾ ಅರ್ಜಿ ಭರ್ತಿ ಮಾಡುವಾಗ ಫೀಮೇಲ್ ಎಂದು ಬರೆದದ್ದೇ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ ಎಂದು ವರದಿಗಳು ತಿಳಿಸಿವೆ.
ಜಲ್ಲಿ ಕಟ್ಟು ಸ್ಪರ್ಧೆಗೆ ಅನುಮತಿ ನಿರಾಕರಣೆ: ಪೊಲೀಸರ ಮೇಲೆ ಕಲ್ಲು ತೂರಾಟ