ನವದೆಹಲಿ: ವಿಶ್ವದ ಆತಂಕಕ್ಕೆ ಕಾರಣವಾಗಿರುವ ಕೊರೋನ ವೈರಸ್ ಚೀನಾದಲ್ಲಿ 800ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿದೆ. ಈ ರೋಗದ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಚೀನಾಗೆ ಭಾರತ ಬೆಂಬಲ ಘೋಷಿಸಿದೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಚೀನಾ ಅಧ್ಯಕ್ಷ ಕ್ಸಿಜಿನ್‌ಪಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ಚೀನಾದಲ್ಲಿ ಉಂಟಾದ ಸಾವು ನೋವಿಗೆ ಮೋದಿ ಸಂತಾಪ ಸೂಚಿಸಿದ್ದಾರೆ.
ಭಾರತದಲ್ಲಿನ ಚೀನಾ ರಾಯಭಾರಿ ಸುನ್ ವೈಡೊಂಗ್ ಅವರು ಕಳೆದ ವಾರ ನೀಡಿದ್ದ ಹೇಳಿಕೆಯಲ್ಲಿ ಚೀನಾದಲ್ಲಿರುವ ಭಾರತೀಯರ ಆರೋಗ್ಯ ಹಾಗೂ ಸುರಕ್ಷತೆಯನ್ನು ಸಂರಕ್ಷಿಸುವುದಕ್ಕಾಗಿ ಭಾರತದೊಂದಿಗೆ ಶ್ರಮಿಸಲು ತನ್ನ ದೇಶ ಸಿದ್ಧವಿದೆಯೆಂದು ಹೇಳಿದ್ದರು.
ಕೊರೋನ ವೈರಸ್ ವಿರುದ್ಧದ ಹೋರಾಟ; ಚೀನಾಗೆ ಭಾರತ ಬೆಂಬಲ
Follow Us