ಭೋಪಾಲ್: ಸೆಲ್ಫಿ ತೆಗೆಯಲು ಹೋದ ಇಬ್ಬರು ಹುಡುಗಿಯರು ಪೆಂಚ್ ನದಿ ಪ್ರವಾಹದಲ್ಲಿ ಸಿಲುಕಿ ಒಂದು ಗಂಟೆ ಕಾಲ ಪರದಾಡಿದ್ದಾರೆ.
ಛಿಂದ್ವಾರ ಬಳಿ ಈ ಘಟನೆ ನಡೆದಿದೆ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಿಂದ 273 ಕಿ.ಮೀ ದೂರದಲ್ಲಿರುವ ಛಿಂದ್ವಾರ ಜಿಲ್ಲೆಯ ಪೆಂಚ್ ನದಿ ಪ್ರವಾಹದಲ್ಲಿ ಸಿಲುಕಿದ್ದ ಈ ಇಬ್ಬರು ಹುಡುಗಿಯರನ್ನು ಸ್ಥಳೀಯ ಪೊಲೀಸರು ರಕ್ಷಿಸಿದ್ದಾರೆ.
ಜುನ್ನಾರ್ಡಿಯೋ ಪಟ್ಟಣದಿಂದ ಆರು ಹುಡುಗಿಯರು ಪಿಕ್ನಿಕ್ಗಾಗಿ ಬೆಲ್ಖೇದಿ ಗ್ರಾಮದಲ್ಲಿರುವ ಪೆಂಚ್ ನದಿ ಪ್ರದೇಶಕ್ಕೆ ಬಂದಿದ್ದಾಗ ಈ ಘಟನೆ ನಡೆದಿದೆ. ಪಿಯು ವಿದ್ಯಾರ್ಥಿನಿಯರಾದ ಮೇಘ ಜಾವ್ರೆ ಮತ್ತು ವಂದನಾ ತ್ರಿಪಾಠಿ ಉತ್ತಮ ಸೆಲ್ಫಿ ತೆಗೆಯಲು ನದಿ ಮಧ್ಯದ ಬಂಡೆಗಳ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದ ವೇಳೆಯಲ್ಲೇ ನದಿ ನೀರಿನ ಮಟ್ಟ ಹೆಚ್ಚಿ ಪ್ರವಾಹದಲ್ಲಿ ಸಿಲುಕಿದ್ದಾರೆ. ಈ ವೇಳೆ ಇಬ್ಬರೂ ಹುಡುಗಿಯರು ಕಿರುಚಿದ್ದು, ನದಿ ದಡದಲ್ಲಿದ್ದವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. 12 ಪೊಲೀಸರು ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿನಿಯರನ್ನು ರಕ್ಷಿಸಿದ್ದಾರೆ. ಗಾಬರಿಗೊಳಗಾಗಿದ್ದ ಅವರು ಮಾತನಾಡಲೂ ಹೆದರುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ಸಿಂಗ್ ತಿಳಿಸಿದ್ದಾರೆ.
ಸೆಲ್ಫಿ ತೆಗೆಯಲು ಹೋಗಿ ಪ್ರವಾಹದಲ್ಲಿ ಸಿಲುಕಿದ ಹುಡುಗಿಯರು…
Follow Us