Saturday, April 17, 2021

ನಿಮಿಷಕ್ಕೆ 300ಇಟ್ಟಿಗೆಗಳನ್ನು ತಯಾರಿಸುವ ಸ್ವಯಂ ಚಾಲಿತ ಬ್ರಿಕ್ ಮೇಕಿಂಗ್ ಮಷಿನ್

newsics.com

ಹರಿಯಾಣ: ಹರಿಯಾಣಾದ ಸತೀಶ್ ಕುಮಾರ್ ( 46) ಎನ್ನುವವರು ಜಗತ್ತಿನ ಮೊದಲ ಸ್ವಯಂಚಾಲಿತ ಇಟ್ಟಿಗೆ ತಯಾರಿಸುವ ಯಂತ್ರವನ್ನು ತಯಾರಿಸಿದ್ದಾರೆ.
ಹರಿಯಾಣಾದ‌ ಸೋನೇಪತ್ ಲಾಡ್ರವಾನ್ ಹಳ್ಳಿಯ ಈ ವ್ಯಕ್ತಿ ಎಸ್ ಎನ್ ಪಿ ಸಿ ಗ್ರೂಪ್ ಎಂಬ ಸಂಸ್ಥೆಯ ಸಂಸ್ಥಾಪಕರೂ ಆಗಿದ್ದಾರೆ.


ಇವರು ತಯಾರಿಸಿದ ಸ್ವಯಂ ಚಾಲಿತ ಇಟ್ಟಿಗೆ ಯಂತ್ರ ನಿಮಿಷಕ್ಕೆ 300 ಇಟ್ಟಿಗೆಗಳನ್ನು ಉತ್ಪಾದಿಸುತ್ತದೆ. ಈ ಮೊಬೈಲ್ ಬ್ರಿಕ್ ಮೇಕಿಂಗ್ ಯಂತ್ರವು ವಾಹನದಂತೆ ಚಲಿಸಬಲ್ಲದು.ಅಲ್ಲದೆ ಈ ಯಂತ್ರದಿಂದ ಶೇ. 45ರಷ್ಟು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಬಹುದಾಗಿದೆ. ಒಮ್ಮೆಗೆ 120ಕಾರ್ಮಿಕರ ಕೆಲಸವನ್ನು ಮಾಡುವಷ್ಟು ಸಾಮರ್ಥ್ಯ ಈ ಯಂತ್ರಕ್ಕಿದೆ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಖ್ಯಾತಿಗಳಿಸಿದ ಈ ಯಂತ್ರವು ನ್ಯಾಷನಲ್ ಸ್ಟಾರ್ಟ್ ಅಪ್ ಅವಾರ್ಡ್ ಅನ್ನು ಗೆದ್ದುಕೊಂಡಿದೆ.
ಭಾರತದಲ್ಲಿ ಕಟ್ಟಡಗಳ ಉದ್ಯಮವು ಪ್ರವರ್ಧಮಾನಕ್ಕೆ ಬರುತ್ತಿರುವುದರಿಂದ ಇಟ್ಟಿಗೆಗಳ ಬೇಡಿಕೆ ಹೆಚ್ಚುತ್ತಿವೆ. ಹೀಗಾಗಿ ಈ ಸ್ವಯಂಚಾಲಿತ ಇಟ್ಟಿಗೆ ತಯಾರಿಸುವ ಯಂತ್ರದ ಬೇಡಿಕೆ ಕೂಡ ಜಾಸ್ತಿಯಾಗಿದೆ.

ಸಿಹಿ ಸುದ್ದಿ ಹಂಚಿಕೊಂಡ ಶ್ರೇಯಾ ಘೋಷಾಲ್: ಫೋಟೋ ವೈರಲ್

 

ಮತ್ತಷ್ಟು ಸುದ್ದಿಗಳು

Latest News

ಬೆಂಗಳೂರಿನಲ್ಲಿ 11, 404 ಕೊರೋನಾ ಸೋಂಕು, ರಾಜ್ಯದಲ್ಲಿ 17489 ಪ್ರಕರಣ, 80 ಜನರ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ  ರಾಜ್ಯದಲ್ಲಿ ಹೊಸದಾಗಿ  17,489  ಮಂದಿಗೆ ಸೋಂಕು ತಗುಲಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ...

ಲಾಕ್ ಡೌನ್ ವೇಳೆ ಹಾಟ್ ಯುವಕರನ್ನು ಹುಡುಕಿ ಹೊರಟ ಯುವತಿಗೆ ದಂಡ

newsics.com ಲಂಡನ್: ಜನರು ಲಾಕ್ ಡೌನ್ ವೇಳೆ ಮನೆಯಲ್ಲಿ ಇರಬೇಕು ಎಂದು ಪೊಲೀಸರು ಸೂಚಿಸುತ್ತಾರೆ. ಆದರೆ ಲಂಡನ್ ನಲ್ಲಿ ಯುವತಿಯೊಬ್ಬಳು ಲಾಕ್ ಡೌನ್ ವೇಳೆ ಹಾಟ್ ಯುವಕರನ್ನು ಹುಡುಕಿಕೊಂಡು ಹೋಗಿದ್ದಳು. ಈ ಸಾಹಸಕ್ಕೆ ಹೋದ ಯುವತಿ...

41 ಅಕ್ರಮ ವಲಸಿಗರ ಜಲ ಸಮಾಧಿ

newsics.com ಟ್ಯುನಿಷಿಯಾ: ಇಟಲಿಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದ 41 ವಲಸಿಗರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಟ್ಯುನಿಷಿಯಾ ಸಮುದ್ರ ತೀರದಲ್ಲಿ ಈ  ದುರಂತ ಸಂಭವಿಸಿದೆ. ಈ ವಲಸಿಗರಿದ್ದ ಹಡಗು ಅಪಘಾತಕ್ಕೀಡಾದ ಪರಿಣಾಮ ವಲಸೆ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ....
- Advertisement -
error: Content is protected !!