newsics.com
ಕೇರಳ: ಸೆಲ್ಫಿ ಹುಚ್ಚು ಅದೇಷ್ಟೋ ಜನರನ್ನು ಬಲಿ ತೆಗೆದುಕೊಂಡಿದೆ. ಆದರೂ ಜನರು ಎಚ್ಚೆತ್ತುಕೊಂಡಿಲ್ಲ. ಕೇರಳದಲ್ಲಿ ತಾಯಿಯೊಬ್ಬಳು ತನ್ನ ಮಗುವಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮಗುವನ್ನೇ ಕಳೆದುಕೊಂಡಿದ್ದಾಳೆ.
ಕೇರಳದ ಅಲಪ್ಪುಳ ಬೀಚ್ ಗೆ ಈ ದಂಪತಿ ತಮ್ಮ ಎರಡೂವರೆ ವರ್ಷದ ಮಗುವಿನ ಜತೆ ಬಂದಿದ್ದಾರೆ.
ತಾಯಿ ತನ್ನ ಎರಡೂವರೆ ವರ್ಷದ ಆದಿಕೃಷ್ಣ ಎಂಬ ಮಗುವಿನ ಜತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದಾಳೆ. ಈ ವೇಳೆ ಜೋರಾದ ಅಲೆ ಬಂದು ಬಡಿದ ಪರಿಣಾಮ ತಾಯಿ ತನ್ನ ಮಗುವನ್ನು ಕೈಬಿಟ್ಟಿದ್ದಾಳೆ. ಪರಿಣಾಮ ಮಗು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಈ ದಂಪತಿ ಪಲಕ್ಕಡ ನಿವಾಸಿಗಳಾಗಿದ್ದು, ಸಂಬಂಧಿಕರ ಮದುವೆಗಾಗಿ ತ್ರಿಶೂರ್ ಗೆ ಬಂದಿದ್ದರು.
ಈ ವೇಳೆ ಎಲ್ಲ ಸಂಬಂಧಿಕರು ಸೇರಿ ಸಮುದ್ರಕ್ಕೆ ಹೋಗುವ ಪ್ಲ್ಯಾನ್ ಮಾಡಿದ್ದರು. ಆದರೆ ಅಪಾಯಕಾರಿ ಅಲೆಗಳ ಜತೆ ಸೆಲ್ಫಿ ತೆಗೆದುಕೊಳ್ಳಲು ಹೋದ ತಾಯಿ ಮಾತ್ರ ಮಗುವನ್ನೇ ಕಳೆದುಕೊಂಡಿದ್ದು ದುರಂತ.
ಬೀಚ್’ನಲ್ಲಿ ಸೆಲ್ಫಿ ತೆಗೆಯಲು ಹೋದ ತಾಯಿ; ಮಗು ಸಮುದ್ರಪಾಲು
Follow Us