ಮೀರತ್: ಉತ್ತರಪ್ರದೇಶದಲ್ಲಿ ಸಾಧುಗಳ ಹತ್ಯೆ ಪ್ರಕರಣಗಳು ಮುಂದುವರಿದಿವೆ. ಮೀರತ್ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬತಿಲಕ ಮತ್ತು ಕೇಸರಿ ಬಟ್ಟೆ ಧರಿಸಿದ ಸನ್ಯಾಸಿಯೊಬ್ಬರನ್ನು ಹೀಯಾಳಿಸಿ, ಹೊಡೆದು ಹತ್ಯೆಗೈದಿದ್ದಾನೆ.
ಮೀರತ್’ನ ಶಿವ ದೇವಾಲಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅಮ್ದುಲ್ಲಾಪುರ ಪ್ರದೇಶದ ಮೊಹಲ್ಲಾ ಹಂದಿಯಾ ನಿವಾಸಿ ಸಾಧು ಕಾಂತಿ ಪ್ರಸಾದ್ (60) ಕೊಲೆಯಾದವರು. ಹತ್ಯೆಯಾದ ಸಾಧು ಶಿವ ಮಂದಿರದ ಹೊರಗೆ ಪ್ರಸಾದ ಮಾರಾಟ ಮಾಡುವ ಸಣ್ಣ ಅಂಗಡಿಯೊಂದನ್ನು ನಡೆಸುತ್ತಿದ್ದರು.
ಕೊರೋನಾಗೆ ಸ್ವಾಮೀಜಿ ಬಲಿ
ತಮ್ಮ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಸಮಯದಲ್ಲಿ ಅನಾಸ್ ಖುರೇಷಿ ಎಂಬಾತ ಇವರನ್ನು ತಡೆದು, ಹಣೆಗೆ ತಿಲಕ, ಕೇಸರಿ ಬಟ್ಟೆ ಧರಿಸಿರುವುದಕ್ಕೆ ಹಂಗಿಸಿದ್ದಾನೆ, ಇನ್ನು ಮುಂದೆ ಈ ರೀತಿಯ ಬಟ್ಟೆ ಹಾಗೂ ತಿಲಕ ಧರಿಸದಂತೆ ಹೇಳಿ ಮನಸೋ ಇಚ್ಛೆ ಥಳಿಸಿದ್ದಾನೆ. ಅಲ್ಲಿಂದ ತಪ್ಪಿಸಿಕೊಂಡ ಕಾಂತಿ ಪ್ರಸಾದ್ ಅವರು, ಈ ಬಗ್ಗೆ ಖುರೇಷಿ ಮನೆಯವರಿಗೆ ದೂರು ಹೇಳಲು ಹೋಗಿದ್ದರು. ಆಗ ಅಲ್ಲಿಗೆ ಬಂದ ಖುರೇಷಿ ಕಾಂತಿಪ್ರಸಾದ್ ಅವರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಿಸದೆ ಕಾಂತಿಪ್ರಸಾದ್ ಕೊನೆಯುಸಿರೆಳೆದರು. ಆರೋಪಿ ಖುರೇಷಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಾಧು ಹತ್ಯೆ ಆರೋಪಿಗಳಿಗೆ ಜಾಮೀನಿಲ್ಲ:
ಈ ಮಧ್ಯೆ, ಏಪ್ರಿಲ್ ನಲ್ಲಿ ಮಹಾರಾಷ್ಟ್ರದ ಪಾಲ್ಗರ್ನಲ್ಲಿ ನಡೆದ ಸಾಧುಗಳ ಗುಂಪು ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದವರಲ್ಲಿ 25 ಮಂದಿಗೆ ಜಾಮೀನು ನೀಡಲು ದಹನು ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಡಿ.ಎಚ್. ಕೇಲುಸ್ಕರ್ ಅವರು ನಿರಾಕರಿಸಿದ್ದಾರೆ.
ಏಪ್ರಿಲ್ 16ರಂದು ಕಾರಿನಲ್ಲಿ ತೆರಳುತ್ತಿದ್ದ ಇಬ್ಬರು ಸಾಧುಗಳು ಹಾಗೂ ಅವರ ಚಾಲಕನನ್ನು ಪಾಲ್ಗರ್ನಲ್ಲಿ ಸ್ಥಳೀಯರು ಹೊಡೆದು ಹತ್ಯೆ ಮಾಡಿದ್ದರು. ಸಾಧುಗಳನ್ನು ನೋಡಿ ಮಕ್ಕಳ ಕಳ್ಳರೆಂದು ಭಾವಿಸಿ ಕಾನೂನನ್ನು ಕೈಗೆ ತೆಗೆದುಕೊಂಡಿದ್ದರು. ಈ ಕ್ರೂರ ಘಟನೆಗೆ ರಾಷ್ಟ್ರಾದ್ಯಂತ ವಿರೋಧ ವ್ಯಕ್ತವಾಗಿತ್ತು. ಸುಮಾರು 150ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ, ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗಿತ್ತು. ಈ 25 ಮಂದಿ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಕ್ಲಿನಿಕಲ್ ಟ್ರಯಲ್’ನ ಅಂತಿಮ ಹಂತದಲ್ಲಿ ಆಕ್ಸ್ಫರ್ಡ್ ವಿವಿ ಲಸಿಕೆ