newsics.com
ನವದೆಹಲಿ: ಮದುವೆಯಾದ ಬಳಿಕ ಅದರ ನೋಂದಣಿ ಸಂದರ್ಭದಲ್ಲಿ ವಧು ಮತ್ತು ವರನ ನೇರ ಉಪಸ್ಥಿತಿ ಅಂದರೆ ಕಚೇರಿಯಲ್ಲಿ ಭೌತಿಕವಾಗಿ ಹಾಜರಿರಬೇಕಾದುದು ಕಡ್ಡಾಯವಲ್ಲ. ಬದಲಾಗಿ ವಿಡಿಯೋ ಕಾನ್ಪರೆನ್ಸ್ ಮೂಲಕ ಕೂಡ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಹರ್ಯಾಣ ಮೂಲದ ದಂಪತಿಯೊಬ್ಬರು ಸಲ್ಲಿಸಿದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಈ ತೀರ್ಪು ನೀಡಲಾಗಿದೆ. ಬ್ರಿಟನ್ ನಲ್ಲಿರುವ ಯುವಕ ಮತ್ತು ಅಮೆರಿಕದಲ್ಲಿ ಇರುವ ಯುವತಿಯ ಮದುವೆ 2019 ಡಿಸೆಂಬರ್ ನಲ್ಲಿ ಭಾರತದಲ್ಲಿ ನಡೆದಿತ್ತು. ಬಳಿಕ ಮದುವೆ ನೋಂದಣಿಗೆ ಅರ್ಜಿ ಸಲ್ಲಿಸಲಾಗಿತ್ತು. ವರ ಮತ್ತು ವಧು ತಮ್ಮ ವೃತ್ತಿ ಮುಂದುವರಿಸಲು ಬ್ರಿಟನ್ ಮತ್ತು ಅಮೆರಿಕಕ್ಕೆ ತೆರಳಿದ್ದರು. ಬಳಿಕ ಲಾಕ್ ಡೌನ್ ನಿಂದಾಗಿ ವಿಮಾನ ಸಂಚಾರ ರದ್ದು ಮಾಡಲಾಯಿತ್ತು.
ಇದರಿಂದಾಗಿ ಕಚೇರಿ ಅಧಿಕಾರಿಗಳು ಸೂಚಿಸಿದ ಸಮಯಕ್ಕೆ ನೋಂದಣಿ ಕಚೇರಿಗೆ ಹಾಜರಾಗಲು ಸಾಧ್ಯವಾಗಿರಲ್ಲಿಲ್ಲ. ಆನ್ ಲೈನ್ ನಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಮನವಿ ಮಾಡಿದ್ದರು.
ಈ ಮನವಿಯನ್ನು ಕಚೇರಿ ಅಧಿಕಾರಿಗಳು ತಳ್ಳಿಹಾಕಿದ್ದರು. ಹೈಕೋರ್ಟ್ ಕೂಡ ಈ ಅರ್ಜಿ ತಿರಸ್ಕರಿಸಿದ ಕಾರಣ ಅಂತಿಮವಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಲಾಯಿತು. ಇದೀಗ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ರಾಮ ಸುಬ್ರಹ್ಮಣ್ಯಂ ಅವರನ್ನು ಒಳಗೊಂಡ ಪೀಠ ಈ ತೀರ್ಪು ನೀಡಿದೆ.