ಚಂಡೀಗಡ: ಪಂಜಾಬ್ನಲ್ಲಿ ನಡೆದ ಕಳ್ಳಭಟ್ಟಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ.
ತರ್ನ್ ಟರಾನ್ ಜಿಲ್ಲೆಯಲ್ಲಿ ಶನಿವಾರ ಮತ್ತೆ 23 ಮಂದಿ ಮೃತಪಟ್ಟಿದ್ದು, ಈ ಮೂಲಕ ಈ ಜಿಲ್ಲೆಯಲ್ಲಿ ಸಾವಿಗೀಡಾವರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಕುಲ್ವಂತ್ ಸಿಂಗ್ ತಿಳಿಸಿದ್ದಾರೆ. ಅಮೃತಸರದಲ್ಲಿ 11 ಮತ್ತು ಗುರುದಾಸ್ಪುರದ ಬಟಾಲದಲ್ಲಿ 9 ಮಂದಿ ಅಸುನೀಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 10 ಜನರನ್ನು ಬಂಧಿಸಿದ್ದಾರೆ.
ಪಂಜಾಬ್ ಕಳ್ಳಭಟ್ಟಿ ದುರಂತ; ಮೃತರ ಸಂಖ್ಯೆ 62ಕ್ಕೇರಿಕೆ
Follow Us