ನವದೆಹಲಿ: ಗೃಹಸಚಿವ ಅಮಿತ್ ಶಾ ಕೊರೋನಾ ಸೋಂಕಿಗೆ ತುತ್ತಾಗುತ್ತಿದ್ದಂತೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಅಗಸ್ಟ್ 5 ರಂದು ನಡೆಯಬೇಕಿರುವ ರಾಮಮಂದಿರ ಭೂಮಿಪೂಜೆಯ ಸಮಾರಂಭಕ್ಕೆ ಉಮಾಭಾರತಿ ಗೈರಾಗುವ ಮುನ್ಸೂಚನೆ ನೀಡಿದ್ದಾರೆ.
ಉಮಾಭಾರತಿ ರಾಮಮಂದಿರ ಭೂಮಿಪೂಜೆಗೆ ಪ್ರಮುಖ ಆಹ್ವಾನಿತರಾಗಿದ್ದು, ಕೊವಿಡ್-19 ಸೋಂಕಿನ ಭಯದಿಂದ ಉಮಾಭಾರತಿ ಕಾರ್ಯಕ್ರಮದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
ರಾಮಮಂದಿರ ಭೂಮಿಪೂಜೆಗೆ ಮುಹೂರ್ತ ನೀಡಿದ್ದ ವಿದ್ವಾಂಸರಿಗೆ ಬೆದರಿಕೆ ಕರೆ
ನಾನು ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ಇನ್ನೊಮ್ಮೆ ಭೇಟಿ ಕೊಟ್ಟು ಎಲ್ಲ ವೀಕ್ಷಣೆ ಮಾಡುತ್ತೇನೆ. ಭೋಪಾಲದಿಂದ ಉತ್ತರ ಪ್ರದೇಶಕ್ಕೆ ರೈಲಿನಲ್ಲಿ ಬರಬೇಕು. ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಈಗಾಗಲೇ ಅಮಿತ್ ಶಾ ಕೂಡ ಆಸ್ಪತ್ರೆಗೆ ದಾಖಲಾಗಿದ್ದು ಮೋದಿಯವರ ಆರೋಗ್ಯದ ಕುರಿತು ಆತಂಕ ಎದುರಾಗಿದೆ. ಹೀಗಾಗಿ ನಾನು ಭೂಮಿಪೂಜೆಗೆ ಬರುವುದಿಲ್ಲ ಎಂದು ಉಮಾಭಾರತಿ ಹೇಳಿರೋದು ಅಚ್ಚರಿಗೆ ಕಾರಣವಾಗಿದೆ.
ರಾಮಮಂದಿರ ಭೂಮಿಪೂಜೆಗೆ ರಾಜ್ಯದ 8 ಗಣ್ಯರಿಗೆ ಆಹ್ವಾನ
ಅಮಿತ್ ಶಾ ಕೊರೋನಾ ಸೋಂಕಿಗೆ ತುತ್ತಾಗಿರೋದರಿಂದ ಅವರು ಕೂಡ ರಾಮಮಂದಿರ ಶಿಲಾನ್ಯಾಸ ಸಮಾರಂಭಕ್ಕೆ ಹಾಜರಾಗುವಂತಿಲ್ಲ. ಇದೀಗ ಉಮಾಭಾರತಿ ಕೂಡ ಕಾರ್ಯಕ್ರಮದಿಂದ ದೂರ ಉಳಿದಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೊರತುಪಡಿಸಿ ಬೇರಾವ ಸಿಎಂಗಳನ್ನು ಕಾರ್ಯಕ್ರಮ ಕ್ಕೆ ಆಹ್ವಾನಿಸಿಲ್ಲ ಎನ್ನಲಾಗಿದೆ. ಬಿಜೆಪಿ ಹಿರಿಯ ನಾಯಕರಾದ ಅಡ್ವಾಣಿ, ಮುರುಳಿ ಮನೋಹರ ಜೋಷಿ ಕೂಡ ಕಾರ್ಯಕ್ರಮವನ್ನು ಮನೆಯಲ್ಲೇ ಕುಳಿತು ವೀಕ್ಷಿಸಲಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಕರೋನಾ ಕರಿನೆರಳು ಐತಿಹಾಸಿಕ ಕಾರ್ಯಕ್ರಮದ ಸಂಭ್ರಮದ ಮೇಲೆ ಬಿದ್ದಂತಾಗಿದೆ.