ಚೆನ್ನೈ: ಖ್ಯಾತ ಕಾದಂಬರಿಕಾರ ಹಾಗೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತಮಿಳು ಬರಹಗಾರ ತಮಿಳುನಾಡಿನ ಸಾ.ಕಂದಸಾಮಿ (79) ಶುಕ್ರವಾರ ನಿಧನರಾದರು.
ಅನಾರೋಗ್ಯದಿಂದ ಕಳೆದ 10 ದಿನಗಳಿಂದ ಬಳಲುತ್ತಿದ್ದ ಕಂದಸಾಮಿ, ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದರು. ಇವರ ‘ವಿಸಾರಣೈ’ ಕಾದಂಬರಿಗೆ 1998ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಚೀನಾ ಮತ್ತು ಅದರ ಇತಿಹಾಸವನ್ನು ಆಧರಿಸಿದ ಕೃತಿಯು ಕಂದಸಾಮಿ ಅವರ ಕೊನೆಯ ಕೃತಿಯಾಗಿದೆ.
ಖ್ಯಾತ ಕಾದಂಬರಿಕಾರ ಸಾ. ಕಂದಸಾಮಿ ಇನ್ನಿಲ್ಲ
Follow Us