ಮುಂಬೈ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ನಿವಾಸದ ಬಳಿ ಗುಂಡಿನ ಸದ್ದು ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಕಂಗನಾ ಮನೆಯ ಬಳಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಜುಲೈ 31ರಂದು ತಮ್ಮ ನಿವಾಸದ ಬಳಿ ಕೇಳಿಬಂದ ಗುಂಡಿನ ಸದ್ದಿಗೆ ಕಂಗನಾ ಗಾಬರಿಗೊಂಡಿದ್ದು, ಪೊಲೀಸರ ಮೊರೆ ಹೋಗಿದ್ದಾರೆ. ಕೋಣೆಯಲ್ಲಿದ್ದ ಕಂಗನಾಗೆ 11.30ರ ವೇಳೆಗೆ ಗುಂಡಿನ ಸದ್ದು ಕೇಳಿಸಿದೆ. ತಕ್ಷಣವೇ ತಮ್ಮ ಭದ್ರತಾ ಸಿಬ್ಬಂದಿಗಳನ್ನು ಎಚ್ಚರಿಸಿ ನಂತರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬಾಲಿವುಡ್ ಸ್ವಜನಪಕ್ಷಪಾತ ಹಾಗೂ ಸುಶಾಂತ್ ಸಿಂಗ್ ಸಾವಿನ ವಿಚಾರದ ಬಗ್ಗೆ ಕಂಗನಾ ಸರಣಿ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿದ್ದಾರೆ.
ಕಂಗನಾ ಮನೆ ಬಳಿ ಗುಂಡಿನ ಸದ್ದು, ಬಿಗಿ ಬಂದೋಬಸ್ತ್
Follow Us