Thursday, December 2, 2021

ಬಿಎಸ್ 4 ಮಾದರಿ ವಾಹನ ಮಾರಾಟಕ್ಕೆ ಏ.24ರ ಸುಪ್ರೀಂ ಗಡುವು

Follow Us

ನವದೆಹಲಿ: ಬಿಎಸ್ 4 ಮಾದರಿಯ ವಾಹನಗಳ ಮಾರಾಟಕ್ಕೆ ಏಪ್ರೀಲ್ 24ರವರೆಗೆ ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ.
ದೇಶಾದ್ಯಂತ ಬಿಎಸ್ 4 ಮಾದರಿಯ ವಾಹನಗಳ ಮಾರಾಟ ಹಾಗೂ ನೊಂದಣಿಗೆ ಮಾರ್ಚ್ 31 ಡೆಡ್ ಲೈನ್ ನೀಡಲಾಗಿತ್ತು. ಆದ್ರೇ ಕೊರೋನಾ ವೈರಸ್ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿರುವುದರಿಂದ, ಮಾರಾಟ ಸ್ಥಗಿತಗೊಂಡಿತ್ತು.
ಈ ಕುರಿತಂತೆ ಫೆಡರೇಷನ್ ಆಫ್ ಆಟೋಮೊಬೈಲ್ಸ್ ಡೀಲರ್ ಅಸೋಸಿಷೇಯನ್(ಎಫ್‌ಎಡಿಎ) ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಇದರಿಂದಾಗಿ ಬಿಎಸ್4 ಮಾದರಿಯ 15 ಸಾವಿರ ಪ್ಯಾಸೆಂಜರ್ ವಾಹನಗಳು, 12 ಸಾವಿರ ಕಮರ್ಷಿಯಲ್ ವಾಹನಗಳು 7 ಲಕ್ಷ ಟೂ ವೀಲರ್ ಗಳ ಮಾರಾಟ ಹಾಗೆಯೇ ಉಳಿದುಬಿಟ್ಟಿದೆ. ಹೀಗಾಗಿ ಡೆಡ್ ಲೈನ್ ವಿಸ್ತರಣೆ ಮಾಡುವಂತೆ ನ್ಯಾಯಪೀಠವನ್ನು ಕೇಳಿಕೊಂಡಿತ್ತು.
ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠ, ಮತ್ತೆ ಡೆಡ್ ಲೈನ್ ವಿಸ್ತರಿಸುವುದಿಲ್ಲ. ಪರಿಸರ ಹಾನಿಗೆ ಬಿಡುವುದು ಇಲ್ಲ. ಲಾಕ್ ಡೌನ್ ಬಳಿಕ ಹತ್ತು ದಿನಗಳಲ್ಲಿ ಬಿಎಸ್4 ಮಾದರಿಯ ವಾಹನಗಳ ಮಾರಾಟ, ನೊಂದಣಿ ಮುಕ್ತಾಯಗೊಳಿಸಬೇಕು ಎಂದು ಸೂಚಿಸಿದೆ.

ಮತ್ತಷ್ಟು ಸುದ್ದಿಗಳು

Latest News

‘ಮಿರ್ಜಾಪುರ್’ ಖ್ಯಾತಿಯ ನಟ ಬ್ರಹ್ಮ ಮಿಶ್ರಾ ಮೃತದೇಹ ಪತ್ತೆ!

newsics.com ಮುಂಬೈ: 'ಮಿರ್ಜಾಪುರ್' ವೆಬ್ ಸೀರೀಸ್ ನಲ್ಲಿ ಲಲಿತ್ ಪಾತ್ರದ ಮೂಲಕ ಹೆಸರುವಾಸಿಯಾಗಿದ್ದ ನಟ ಬ್ರಹ್ಮ ಮಿಶ್ರಾ ಮುಂಬೈನಲ್ಲಿ ನಿಧನರಾಗಿದ್ದಾರೆ. ಮುಂಬೈನ ವರ್ಸೋವಾದಲ್ಲಿರುವ ಅವರ ಫ್ಲಾಟ್‌ ನಲ್ಲಿ ಅರೆ...

ಸಿಲಿಂಡರ್ ಸ್ಫೋಟಗೊಂಡು 4 ತಿಂಗಳ ಮಗು ಸಾವು

newsics.com ಮುಂಬೈ: ಸಿಲಿಂಡರ್ ಸ್ಫೋಟದಿಂದ 4 ತಿಂಗಳ ಮಗು ಸಾವನ್ನಪ್ಪಿದ ಘಟನೆ ಮುಂಬೈನ ವರ್ಲಿಯಲ್ಲಿರುವ ಬಿಡಿಡಿ ಚಾಲ್‌ ನಲ್ಲಿ ಸಂಭವಿಸಿದೆ. ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ನಾಲ್ಕು ತಿಂಗಳ ಮಗುವಿಗೆ ತೀವ್ರ ಸುಟ್ಟ ಗಾಯಗಳಾಗಿತ್ತು. ಮಗುವನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ,...

ಒಮಿಕ್ರಾನ್ ಪತ್ತೆ ಹಿನ್ನೆಲೆ ರಾಜ್ಯದಲ್ಲಿ ತೀವ್ರ ಕಟ್ಟೆಚ್ಚರ: ಡಾ. ಅಶ್ವತ್ಥ ನಾರಾಯಣ

newsics.com ಬೆಂಗಳೂರು: ರಾಜ್ಯದಲ್ಲಿ ಎರಡು ಒಮಿಕ್ರಾನ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ಕುರಿತು ಸಚಿವ ಡಾ. ಅಶ್ವತ್ಥ ನಾರಾಯಣ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಸರಕಾರ ಕಟ್ಟೆಚ್ಚರ ವಹಿಸಿದೆ ಎಂದು ಹೇಳಿದ್ದಾರೆ. ಇಬ್ಬರ ಸಂಪರ್ಕಿತರನ್ನು...
- Advertisement -
error: Content is protected !!