newsics.com
ಉತ್ತರ ಪ್ರದೇಶ: ಮದುವೆ ಮಾಡುತ್ತಾರೆಂಬ ಭಯಕ್ಕೆ ಏಳು ವರ್ಷಗಳ ಹಿಂದೆ ಮನೆ ಬಿಟ್ಟು ಓಡಿಹೋಗಿದ್ದ ಯುವತಿಯೊಬ್ಬಳು ಈಗ ವಾಣಿಜ್ಯ ಸೇವಾ ಅಧಿಕಾರಿ.
ಓದುವ ಮಹದಾಸೆಯಿಂದ ಕಡಿಮೆ ಹಣದೊಂದಿಗೆ 2013 ರಲ್ಲಿ ಮನೆ ಬಿಟ್ಟು ಹೋಗಿದ್ದ ಉತ್ತರ ಪ್ರದೇಶದ ಮೀರತ್ ನ 28 ವರ್ಷದ ಯುವತಿ ಈಗ ವಾಣಿಜ್ಯ ಸೇವಾ ಅಧಿಕಾರಿಯಾಗಿ ಮನೆಗೆ ಮರಳಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಓದುತ್ತಿರುವಾಗ ಸಂಜು ರಾಣಿ ವರ್ಮಾ ತಾಯಿಯನ್ನು ಕಳೆದುಕೊಂಡಳು. ಬಳಿಕ ಆಕೆಯ ಕುಟುಂಬ ಓದುವುದನ್ನು ಬಿಟ್ಟು ಮದುವೆಯಾಗುವಂತೆ ಒತ್ತಡ ಹೇರಿತು. ಮಹಿಳೆಯರ ಶಿಕ್ಷಣ ಪ್ರೋತ್ಸಾಹಿಸದ ಕುಟುಂಬದಲ್ಲಿ ಜನಿಸಿದ ವರ್ಮಾ ಬೇರೆ ದಾರಿ ಕಾಣದೆ ತನ್ನ ಮಹತ್ವಾಕಾಂಕ್ಷೆ ಸಾಕಾರಗೊಳಿಸಿಕೊಳ್ಳಲು ಬೇರೆ ದಾರಿ ಕಾಣದೆ ಮನೆ ಬಿಡಲು ನಿರ್ಧರಿಸಿದರು.
ಮೀರತ್’ನಲ್ಲಿ ಅಪಾರ್ಟ್ಮೆಂಟ್’ನಲ್ಲಿ ಒಂದು ಸಣ್ಣ ಮನೆ ಬಾಡಿಗೆಗೆ ಪಡೆದರು. ಅಲ್ಲಿ ಅವರು ಖಾಸಗಿ ಬೋಧನಾ ತರಗತಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು. ಖಾಸಗಿ ಸಂಸ್ಥೆಗಳಲ್ಲಿ ಅರೆಕಾಲಿಕ ಬೋಧಕರಾದರು. ಇದೇ ವೇಳೆ ಸಾರ್ವಜನಿಕ ಸೇವಾ ಆಯೋಗ (ಪಿಎಸ್‌ಸಿ) ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಈ ಮಧ್ಯೆ, ಯುಪಿಎಸ್ಸಿ -2018 ಪರೀಕ್ಷೆ ಬರೆದರು. ಅದರ ಫಲಿತಾಂಶ ಕಳೆದ ವಾರ ಪ್ರಕಟವಾಗಿದ್ದು, ವಾಣಿಜ್ಯ ಸೇವಾ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಆದರೆ ವರ್ಮಾ ಅವರು ನಾಗರಿಕ ಸೇವಾ ಪರೀಕ್ಷೆ ಬರೆದು ವಿಭಾಗೀಯ ಮ್ಯಾಜಿಸ್ಟ್ರೇಟ್ ಆಗುವ ಗುರಿ ಹೊಂದಿದ್ದಾರೆ. ಜತೆಗೆ ತನ್ನ ಕುಟುಂಬವನ್ನು ಆರ್ಥಿಕವಾಗಿ ಸದೃಢಗೊಳಿಸಲು ಬಯಸಿದ್ದಾರೆ.
ಸ್ಥೂಲದೇಹಿ, ಮಧುಮೇಹಿಗಳಿಗೆ ಕೊರೋನಾ ಅಪಾಯ ಅಧಿಕ