ತಿರುವನಂತಪುರ: ಚೆನ್ನೈ ಮತ್ತು ತಿರುವಂನತಪುರದಿಂದ ಮಂಗಳೂರಿಗೆ ಬರುತ್ತಿದ್ದ ಎರಡು ರೈಲುಗಳಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಚೆನ್ನೈ ಮತ್ತು ಮಂಗಳೂರು ಮಧ್ಯೆ ಪ್ರಯಾಣಿಸುವ ಸೂಪರ್ ಫಾಸ್ಟ್ ರೈಲಿನಲ್ಲಿ ಚೆನ್ನೈ ನಿವಾಸಿಯೊಬ್ಬರು 25 ಲಕ್ಷ ರೂಪಾಯಿ ಮೌಲ್ಯದ ವಜ್ರ ಮತ್ತು 15 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳೆದುಕೊಂಡಿದ್ದಾರೆ. ಅದೇ ರೀತಿ ಮಂಗಳೂರು ಮತ್ತು ತಿರುವನಂತಪುರ ಮಧ್ಯೆ ಸಂಚರಿಸುವ ಮಲಬಾರ್ ಎಕ್ಸ್ ಪ್ರೆಸ್ ರೈಲ್ಲಿನ ಪ್ರಯಾಣಿಕರೊಬ್ಬರು ಸುಮಾರು 75 ಗ್ರಾಂ ತೂಕ ಬರುವ ಚಿನ್ನಾಭರಣಗಳನ್ನು ಕಳೆದುಕೊಂಡಿದ್ದಾರೆ. ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.