newsics.com
ಬನ್ನಿಹಾಲ್: ಜಮ್ಮು ಮತ್ತು ಕಾಶ್ಮೀರದ ಬನ್ನಿಹಾಲ್ ನಲ್ಲಿ ನವಜಾತ ಶಿಶುವು ಮೃತಪಟ್ಟಿದೆ ಎಂದು ಹೇಳಿದ ಬಳಿಕ ಶಿಶುವನ್ನು ಸಮಾಧಿ ಮಾಡಿ ಒಂದು ಗಂಟೆ ಬಳಿಕ ಒತ್ತಾಯಪೂರ್ವಕವಾಗಿ ಸಮಾಧಿಯನ್ನು ತೋಡಿದಾಗ ಮಗು ಜೀವಂತವಾಗಿರುವ ಘಟನೆ ನಡೆದಿದೆ.
ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಮಗುವನ್ನು ಮೃತಪಟ್ಟಿದೆ ಎಂದು ಘೋಷಿಸಿದ್ದು, ಬಳಿಕ ಮಗುವನ್ನು ಸ್ಮಶಾನದಲ್ಲಿ ಮಣ್ಣು ಮಾಡಲಾಗಿದೆ. ಆದರೆ ಗ್ರಾಮದ ಸ್ಥಳೀಯರು ಮೃತದೇಹವನ್ನು ಹೊರತೆಗೆದು ನಿಮ್ಮೂರಲ್ಲೇ ಸಮಾಧಿ ಮಾಡಬೇಕೆಂದು ಒತ್ತಾಯಿಸಿದ ಹಿನ್ನೆಲೆ ಸಮಾಧಿಯನ್ನು ಅಗೆದು ಮತ್ತೆ ಮಗುವನ್ನು ಹೊರತೆಗೆಯಲಾಗಿದೆ. ಆಗ ಮಗು ಜೀವಂತವಾಗಿರುವುದು ಕಂಡುಬಂದಿದೆ. ನಂತರ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಯ ವೈದ್ಯರು, ಸಿಬ್ಬಂದಿಯ ವಿರುದ್ಧ ಮಗುವಿನ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಇಬ್ಬರು ನೌಕರನನ್ನು ಅಮಾನತು ಮಾಡಿದ್ದು, ತನಿಖೆ ನಡೆಯುತ್ತಿದೆ.
ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದ ವ್ಯಕ್ತಿಗೆ ಒಮೈಕ್ರಾನ್ ಉಪತಳಿ BA.5 ದೃಢ