Tuesday, April 13, 2021

ಕೊರೋನಾ ಸೋಂಕಿಗೆ ತಿರುನಲ್ವೇಲಿ ಹಲ್ವಾ ಅಂಗಡಿ ಮಾಲೀಕ ಬಲಿ!

ಚೆನ್ನೈ: ತಮಿಳುನಾಡು ತಿರುನಲ್ವೇಲಿಯ ನೂರು ವರ್ಷಕ್ಕೂ ಹಳೆಯ, ಜನಪ್ರಿಯ ಹಲ್ವಾ ಅಂಗಡಿ ಮಾಲೀಕ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
ರಾಜಸ್ಥಾನ ಮೂಲದ 80 ವರ್ಷ ವಯಸ್ಸಿನ ಹರಿ ಸಿಂಗ್ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆದರೆ ಇವರ ಸಾವು ಸಂಶಯಕ್ಕೆ ಕಾರಣವಾಗಿದೆ. ಇರುಟ್ಟು ಕಡೈ ಹಲ್ವಾ ಅಂಗಡಿ ಮಾಲೀಕ ಸೋಂಕಿನಿಂದ ಮೃತಪಟ್ಟಿಲ್ಲ, ಬದಲಿಗೆ ಕೊರೋನಾ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಹರಿಸಿಂಗ್ ಅವರನ್ನು ಇತ್ತೀಚೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಅವರಿಗೆ ಕೊರೋನಾ ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ಬಹುಶಃ ಸೋಂಕಿನ ಭೀತಿಗೆ ಸಿಲುಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಹರಿಸಿಂಗ್ ಅವರು ರಾಜಸ್ಥಾನದಿಂದ ತಮಿಳುನಾಡಿಗೆ ವಲಸೆ ಬಂದು ಹಲ್ವಾ ಅಂಗಡಿ ಸ್ಥಾಪಿಸಿ ಜನಪ್ರಿಯರಾಗಿದ್ದರು. ತಿರುನಲ್ವೇಲಿಯ ನೆಲ್ಲೈಪ್ಪರ್ ದೇಗುಲದ ಬಳಿ ಇರುಟ್ಟು ಕಡೈ ಎಂಬ ಸಿಹಿ ಅಂಗಡಿ ತೆರೆದ ಹರಿಸಿಂಗ್ ಅವರು ಸಂಜೆಯಿಂದ ರಾತ್ರಿ ತನಕ ಮಾತ್ರ ಜೀರೋ ಕ್ಯಾಂಡಲ್ ಬಲ್ಬ್ ಬೆಳಕಲ್ಲೇ ಈ ಅಂಗಡಿ ಓಪನ್ ಮಾಡಿರುತ್ತಿದ್ದರು. ಇವರ ಅಂಗಡಿಯ ಹಲ್ವಾ ರುಚಿ ವಿದೇಶಗಳಿಗೂ ಹಬ್ಬಿದೆ.

ಮತ್ತಷ್ಟು ಸುದ್ದಿಗಳು

Latest News

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...

ಮಹಾರಾಷ್ಟ್ರದಲ್ಲಿ 51,751 ಮಂದಿಗೆ ಕೊರೋನಾ ಸೋಂಕು 258 ಜನ‌ ಸಾವು

newsics.comಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 51,751 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 258 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.ಪ್ರಯೋಗಾಲಯಕ್ಕೆ ಬಂದಿದ್ದ 2,33,22,393 ಸ್ಯಾಂಪಲ್‌ಗಳ ಪೈಕಿ 34,58,996 ಮಂದಿಗೆ ಕೊರೋನಾ...
- Advertisement -
error: Content is protected !!