newsics.com
ಕೊಲ್ಕತ್ತಾ: ಈ ಅಜ್ಜಿ ಒಂದೇ ಮೀನನ್ನು ಮಾರಿ ಲಕ್ಷಾಧೀಶೆಯಾಗಿದ್ದಾಳೆ.
ಪಶ್ಚಿಮ ಬಂಗಾಳದ ಸೌತ್ 24 ಪರಗಣ ಜಿಲ್ಲೆಯ ಸುಂಡರ್ಬನ್ಸ್ ಪ್ರದೇಶದ ಸಾಗರ ದ್ವೀಪದ ನಿವಾಸಿ ಪುಷ್ಪಾಕರ್ ಎಂಬ ಮಹಿಳೆ ರಾತ್ರಿ ಬೆಳಗಾಗುವುದರಲ್ಲಿ ಲಕ್ಷಾಧಿಪತಿಯಾಗಿದ್ದಾರೆ.
ಮೀನು ಹಿಡಿಯಲೆಂದು ನದಿ ಪಕ್ಕ ಹೋಗಿದ್ದ ಪುಷ್ಪಾಕರ್’ಗೆ ದೈತ್ಯ ಮೀನೊಂದು ಕಂಡಿತ್ತು. ದೈತ್ಯ ಮೀನು ನೋಡಿದ್ದೇ ತಡ, ನೀರಿಗೆ ಹಾರಿ ಆ ಮೀನನ್ನು ಇತರರ ಸಹಾಯದಿಂದ ದಂಡೆಗೆ ಎಳೆದು ತಂದಿದ್ದಳು.
ಸುಮಾರು 52 ಕೆಜಿ ತೂಕದ ಈ ಮೀನು ಕೆಜಿಗೆ ರೂ.1,200ರಂತೆ ಮಾರಾಟವಾಗಿ ಆಕೆಗೆ 3 ಲಕ್ಷ ರೂ. ಸಿಕ್ಕಿದೆ. ಭೋಲಾ ಮೀನು ಎಂದು ಗುರುತಿಸಲಾದ ಈ ಮೀನನ್ನು ತಿನ್ನುವುದಿಲ್ಲವಾದರೂ ಅದರ ಅಂಗಗಳಿಗೆ ಬೇರೆ ದೇಶಗಳಲ್ಲೂ ಭಾರೀ ಬೇಡಿಕೆಯಿದೆ. ಇದರ ಅಂಗಗಳಲ್ಲಿ ಔಷಧೀಯ ಗುಣಗಳಿವೆ ಎನ್ನಲಾಗಿದೆ.
ಈ ಅಜ್ಜಿ ಮಾರಿದ್ದು ಒಂದೇ ಮೀನು; ಗಳಿಸಿದ್ದು ಮೂರು ಲಕ್ಷ…!
Follow Us