ಅಹಮದಾಬಾದ್: ಈ ಶಾಲೆ ಸೇರಲು ಪ್ರವೇಶ ಪರೀಕ್ಷೆ ಬರೆಯಬೇಕಾಗಿಲ್ಲ. ಜಾತಕ ತೋರಿಸಿದರೆ ಸಾಕು.
ಇದು ಗುಜರಾತಿನ ಅಹಮದಾಬಾದ್ ಸಮೀಪದ ಸಾಬರಮತಿಯಲ್ಲಿರುವ ಹೇಮಚಂದ್ರಾಚಾರ್ಯ ಸಂಸ್ಕೃತ ಪಾಠಶಾಲೆ. ಜಾತಕ ನೋಡಿ ಪ್ರವೇಶ ಕೊಡುವುದು ಹಿಂದಿನಿಂದಲೂ ರೂಢಿಯಲ್ಲಿದೆ.
ಈ ಪಾಠಶಾಲೆಯಲ್ಲಿ ಜ್ಯೋತಿಷ, ಆಯುರ್ವೇದ, ಭಾಷೆ, ವ್ಯಾಕರಣ, ಗಣಿತ, ವೇದ ಗಣಿತ, ಯೋಗ, ಅಥ್ಲೆಟಿಕ್ಸ್, ಮ್ಯೂಸಿಕ್, ಕಲೆ, ಕುದುರೆ ಸವಾರಿ, ಕಾನೂನು, ವಾಸ್ತು ಮುಂತಾದ ವಿಷಯಗಳ ಅಧ್ಯಯನಕ್ಕೆ ಅವಕಾಶವಿದೆ.
ತುಷಾರ್ ತಲವಾಟ್ ಎಂಬ ವಿದ್ಯಾರ್ಥಿ ವೇದಗಣಿತದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆಲುವು ಸಾಧಿಸಿದ ಬಳಿಕ ಈ ಶಾಲೆಗೆ ಅಂತಾರಾಷ್ಟ್ರೀಯಮಟ್ಟದ ಮಾನ್ಯತೆ ಸಿಕ್ಕಿದೆ. ಇಲ್ಲಿ ಕಲಿಯುವ ಮಕ್ಕಳನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್(ಎನ್ಐಒಎಸ್) ಮೂಲಕ ಪರೀಕ್ಷೆ ಬರೆಸಲಾಗುತ್ತದೆ.